Showing posts with label ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ sirigurutandevarada vittala. Show all posts
Showing posts with label ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ sirigurutandevarada vittala. Show all posts

Friday, 6 August 2021

ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ ankita sirigurutandevarada vittala

  ..

Kruti by ಸಿರಿಗುರುತಂದೆವರದವಿಠಲರು sirigurutandevarada vittala 

ಹರಿಸ್ತುತಿ


ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ 

ಕರಪಿಡಿಯೊ ಬಿಂದು ಮಾಧವಾ ಪ


ಚೋರ ತಮನ ಕೊಂದ ಧೀರ ಮಚ್ಛಕನೆಸಾರೋ ವೇದದ ಸಾರ ಮಾರ ಜನಕನೆ 1


ಮಂದರಗಿರಿಯನ್ನೆ ಚಂದಾದಿಂದೆತ್ತಿದೋಕಂದನೆಂತೆಂದೆನ್ನ ಮುಂದಕೆ ಕರೆಯೋ 2


ವರಾಹ ರೂಪವ ತಾಳಿ ಧರೆಯ ಸಲಹಿದೆಯೋದುರುಳ ಮನವನಳಿದು ತ್ವರದಿ ನೀ ಕಾಯೋ 3


ಕಂಬದಿಂದಲಿ ಬಂದ್ಯೊ ಅಂಬುಜನಯನಬಿಂಬನ ಪಾಲಿಸೊ ಅಂಬುಧಿಶಯನ 4


ಇಳೆಯ ದಾನವ ಬೇಡಿ ಬಲಿಯ ಮೆಟ್ಟಿದೆಯಾಭಳಿರೆ ಪಾದವ ತೋರಿ ಉಳಹೊ ಮಹರಾಯ 5


ಛಲದಿಂದ ಕ್ಷತ್ರಿಯ ಕುಲವನಳಿದನೆಬಲವಾದ ದುರಿತವ ಕಳೆಯೊ ಸುರವರನೆ 6


ಶಿಲೆಯ ಸತಿಯ ಮಾಡಿ ಸಲಹಿದ ರಾಮಾನಲಿನಲಿವುತ ಬಾರೊ ಜಲಜ ಸಂಭವ ಪ್ರೇಮಾ 7


ಆಕಳ ಕಾಯ್ದೆಯೊ ಗೋಕುಲನಾಥಏಕಭಕ್ತಿಯನೀಯೋ ಲೋಕವಿಖ್ಯಾತ 8


ಉತ್ತಮ ಸ್ತ್ರೀಯರ ಚಿತ್ತವ ಹರಿಸಿದ್ಯೋಉತ್ತಮ e್ಞÁನವನಿತ್ತು ಪೊರೆಯೊ 9


ತುರಗ ರಾವುತನಾಗಿ ಮೆರೆದಂಥಾ ವೀರಭರದಿ ಕಾಡುವ ಖಳರ ತರಿಯೊ ಗಂಭೀರ 10


ಶರಧಿಶಯನ ತಂದೆವರದವಿಠಲನುಶರಣು ಬಂದವರನ್ನು ನಿರುತ ಕಾಯುವನು 11

***

****