Showing posts with label ಸತ್ಯನಾಥರಿಂದ ಆಶ್ರಮಕೊಂಡು madhwesha krishna satyabhinava teertha stutih. Show all posts
Showing posts with label ಸತ್ಯನಾಥರಿಂದ ಆಶ್ರಮಕೊಂಡು madhwesha krishna satyabhinava teertha stutih. Show all posts

Friday, 27 December 2019

ಸತ್ಯನಾಥರಿಂದ ಆಶ್ರಮಕೊಂಡು madhwesha krishna satyabhinava teertha stutih

ಶ್ರೀ  ಸತ್ಯಾಭಿನವ ತೀರ್ಥರ ಸ್ಮರಣೆ

ಸತ್ಯನಾಥರಿಂದ ಆಶ್ರಮಕೊಂಡು ನಿತ್ಯ ತೃಪ್ತನ ಭಜಿಸುತ್ತ
ಚಿತ್ತ ಶುಧ್ಧಿಯಲಿಂದ ಆಶ್ರಮ ಕಾರ್ಯವ ಶ್ರಧ್ಧೆಯಿಂದಲಿ
ನಡೆಸುತ್ತ||ಪಲ್ಲ||

ಸ್ನಾನಕ್ಕೆ ಹೊರಟ ಶ್ರೀಪಾದರೊಂದು ದಿನ
ಸಂಕಲ್ಪಕ್ಕೆ ಬ್ರಾಹ್ಮಣರನ್ನ ಹುಡುಕಲು
ವೃಧ್ಧ ಬ್ರಾಹ್ಮಣ  ಬಂದು ಸಂಕಲ್ಪ ಮಾಡಿಸಿ
ಅದೃಶ್ಯರಾದರು ಆ ದಿನದಂದು||೧||

ಮಠದ ವ್ಯವಸ್ಥೆ ಸಕ್ರಮವಾಗಿ ನಡಸಿ
ವಿವಿಧ ಸೇವೆಯ ನಡೆಸಲು
ಸೇವಕರ ವ್ಯವಸ್ಥೆ ಮಾಡಿ
ದರ್ಬಾರಿನಂತೆ ಮುಂದುವರಿಸಿದರು||೨||

 ಸಂಚಾರ ಮಾಡುತ್ತ  ದ್ವೈತಮತ ಪ್ರಚುರಿಸಿ
ಕೊಲ್ಹಾಪುರ ಕೃಷ್ಣಾಚಾರ್ಯರಿಗೆ ಸನ್ಯಾಸವಿತ್ತು
 ಸತ್ಯಪೂರ್ಣತೀರ್ಥರೆಂದು ನಾಮಕರಣ ಮಾಡಿ
 ಜ್ಯೇಷ್ಟ ಶುಧ್ಧ ಚತುರ್ದಶಿ ಮಧ್ವೇಶಕೃಷ್ಣನ  ಪಾದಸೇರಿ||೩||
*******