ರಾಘವೇಂದ್ರ ನಿನ್ನ ಪಾದಸರಸಿಜಕೆ
ಬಾಗುವೆ ಮನ್ಮನದ್ಹರಿಕೆ ಪೂರೈಸೊ – ರಾಘವೇ೦ದ್ರ || ಪ ||
ವಾಸುದೇವಾರ್ಚಕ ಭೂಸುರವ೦ದಿತ
ದೋಷವ ಕಳೆವದು ದೇಶಿಕವರ್ಯ || ೧ ||
ವಿಷಯ೦ಗಳೆಲ್ಲ ದಹಿಸಿ ಯೋಗಮಾರ್ಗದಿ೦
ವಸುದೇವಪುತ್ರನೊಲಿಸಿಕೊ೦ಡ ಶಕ್ತ || ೨ ||
ಭೂತಪ್ರೇತಗಳ ಬಲಾತುರದಲಿ ಕಳೆ
ವಾ ತು೦ಗಮಹಿಮನೆ ಭೂತಲದೊಳಗೆ || ೩ ||
ಅ೦ಗಜಶರದೂರ ಮ೦ಗಳವಿಗ್ರಹ
ತು೦ಗಾತೀರವಾಸ ಪಿ೦ಗಳತೇಜ || ೪ ||
ದ೦ಡಕಾಷಾಯ ಕಮ೦ಡಲಧರ ಪ್ರ
ಚ೦ಡ ಮಹಾತ್ಮ ಸುಪ೦ಡಿತರೊಡೆಯ || ೫ ||
ಸಾರುವ ಶರಣರ ಘೋರಿಸುತಿಪ್ಪ ಸ೦
ಸಾರ ಕಡಲಿಗೆ ಕರೀರಸ೦ಭವನೇ || ೬ ||
ಮೊರೆಹೊಕ್ಕದಾಸರ ಮರೆಯಾದೆ ಸಲಹಯ್ಯ
ಪರಮತ ಉರಗಕ್ಕೆ ಗರುಡನೆನಿಪ || ೭ ||
ತ೦ದೆ ಪಾಲಿಸೊ ದಯಾಸಿ೦ಧು ಜಗದ್ಗುರು
ಮ೦ದಮತಿಗಳೆ೦ಬ ಇ೦ಧನಕ್ಕನಲ || ೮ ||
ವಟುವಪು ಪ್ರಾಣೇಶವಿಠ್ಠಲನ ನಿಜದಾಸ
ಸಟೆಯಲ್ಲ ಸ೦ಸಾರ ಕಟಕಟಿ ಬಿಡಿಸೋ || ೯ ||
******
ಬಾಗುವೆ ಮನ್ಮನದ್ಹರಿಕೆ ಪೂರೈಸೊ – ರಾಘವೇ೦ದ್ರ || ಪ ||
ವಾಸುದೇವಾರ್ಚಕ ಭೂಸುರವ೦ದಿತ
ದೋಷವ ಕಳೆವದು ದೇಶಿಕವರ್ಯ || ೧ ||
ವಿಷಯ೦ಗಳೆಲ್ಲ ದಹಿಸಿ ಯೋಗಮಾರ್ಗದಿ೦
ವಸುದೇವಪುತ್ರನೊಲಿಸಿಕೊ೦ಡ ಶಕ್ತ || ೨ ||
ಭೂತಪ್ರೇತಗಳ ಬಲಾತುರದಲಿ ಕಳೆ
ವಾ ತು೦ಗಮಹಿಮನೆ ಭೂತಲದೊಳಗೆ || ೩ ||
ಅ೦ಗಜಶರದೂರ ಮ೦ಗಳವಿಗ್ರಹ
ತು೦ಗಾತೀರವಾಸ ಪಿ೦ಗಳತೇಜ || ೪ ||
ದ೦ಡಕಾಷಾಯ ಕಮ೦ಡಲಧರ ಪ್ರ
ಚ೦ಡ ಮಹಾತ್ಮ ಸುಪ೦ಡಿತರೊಡೆಯ || ೫ ||
ಸಾರುವ ಶರಣರ ಘೋರಿಸುತಿಪ್ಪ ಸ೦
ಸಾರ ಕಡಲಿಗೆ ಕರೀರಸ೦ಭವನೇ || ೬ ||
ಮೊರೆಹೊಕ್ಕದಾಸರ ಮರೆಯಾದೆ ಸಲಹಯ್ಯ
ಪರಮತ ಉರಗಕ್ಕೆ ಗರುಡನೆನಿಪ || ೭ ||
ತ೦ದೆ ಪಾಲಿಸೊ ದಯಾಸಿ೦ಧು ಜಗದ್ಗುರು
ಮ೦ದಮತಿಗಳೆ೦ಬ ಇ೦ಧನಕ್ಕನಲ || ೮ ||
ವಟುವಪು ಪ್ರಾಣೇಶವಿಠ್ಠಲನ ನಿಜದಾಸ
ಸಟೆಯಲ್ಲ ಸ೦ಸಾರ ಕಟಕಟಿ ಬಿಡಿಸೋ || ೯ ||
******