ಪ್ರಾಣೇಶದಾಸರು
ಅಂದುಂಟಿಂದಿಲ್ಲೇಮಾಧವನಿನ್ನ |
ಹೊಂದಿದವರ ಭಯ ಕಳೆದು ಪೊರೆವ
ದಯೆ ಪಶಂತನು ಭೂಪನರಸಿ ಬಳಲಿ |
ಕಂತುಜನಕನೀ ಗತಿಯೆನಲೀ ||
ಅಂತರಿಸದೆ ವಿಧವೆರಲಾಕ್ಷಣಸಂತತಿ
ನೆಲಸಿದೆ ಮನ್ನಿಸುತಾ ದಯ 1
ಕಲಿಯಾಳಿಕೆ ಬಹಳಾಗಿರಲು |
ಮಲಿನಯುಕ್ತ ಧರೆಯಾಗಿರಲು ||
ತಿಳಿದ ಹದಿನೆಂಟು ಪುರಾಣವ ವಿರಚಿಸಿ |
ಸಲಹಿದೆಯುತ್ತಮ ಜೀವರನಾ ದಯೆ 2
ತಿಳಿಯದೆ ನಿನ್ನೊಲುಮೆಯವಗೆಂದು |
ನಳಿನಾನುಜ ನೀ ಬೇಕೆಂದು ||
ಕೊಳಲರಿದರ ಕರದಿತ್ತಾರಣದೊಳು |
ಗೆಲಿಸಿದೆ ತೋಂಡನ ಮುದದಿಂದಾ ದಯೆ 3
ಪಾದಜಲರಸರ ಬದುಕಿಸಿತು |
ಪಾದಪೆಸರೇ ಪತಿತನ ಕಾಯ್ತು ||
ಪಾದದಮುಂದು ಕುಬೇರಜರೀರ್ವರ |
ಪಾದವೇ ಸದ್ಗತಿಗೈದಿಸಿತಾ ದಯ 4
ಆ ಸೈಂಧವನಳಿದರ್ಜುನನ |
ಪೋಷಿಸಿದಂತೆ ಮೃತಾತ್ಮಜನಾ ||
ಭೂಸರಗಿತ್ತಂತೀ ವಿಪ್ರರ ಪ್ರಾ |
ಣೇಶ ವಿಠ್ಠಲ ರಕ್ಷಿಸಬೇಕಾ ದಯೆ 5
********
ಅಂದುಂಟಿಂದಿಲ್ಲೇಮಾಧವನಿನ್ನ |
ಹೊಂದಿದವರ ಭಯ ಕಳೆದು ಪೊರೆವ
ದಯೆ ಪಶಂತನು ಭೂಪನರಸಿ ಬಳಲಿ |
ಕಂತುಜನಕನೀ ಗತಿಯೆನಲೀ ||
ಅಂತರಿಸದೆ ವಿಧವೆರಲಾಕ್ಷಣಸಂತತಿ
ನೆಲಸಿದೆ ಮನ್ನಿಸುತಾ ದಯ 1
ಕಲಿಯಾಳಿಕೆ ಬಹಳಾಗಿರಲು |
ಮಲಿನಯುಕ್ತ ಧರೆಯಾಗಿರಲು ||
ತಿಳಿದ ಹದಿನೆಂಟು ಪುರಾಣವ ವಿರಚಿಸಿ |
ಸಲಹಿದೆಯುತ್ತಮ ಜೀವರನಾ ದಯೆ 2
ತಿಳಿಯದೆ ನಿನ್ನೊಲುಮೆಯವಗೆಂದು |
ನಳಿನಾನುಜ ನೀ ಬೇಕೆಂದು ||
ಕೊಳಲರಿದರ ಕರದಿತ್ತಾರಣದೊಳು |
ಗೆಲಿಸಿದೆ ತೋಂಡನ ಮುದದಿಂದಾ ದಯೆ 3
ಪಾದಜಲರಸರ ಬದುಕಿಸಿತು |
ಪಾದಪೆಸರೇ ಪತಿತನ ಕಾಯ್ತು ||
ಪಾದದಮುಂದು ಕುಬೇರಜರೀರ್ವರ |
ಪಾದವೇ ಸದ್ಗತಿಗೈದಿಸಿತಾ ದಯ 4
ಆ ಸೈಂಧವನಳಿದರ್ಜುನನ |
ಪೋಷಿಸಿದಂತೆ ಮೃತಾತ್ಮಜನಾ ||
ಭೂಸರಗಿತ್ತಂತೀ ವಿಪ್ರರ ಪ್ರಾ |
ಣೇಶ ವಿಠ್ಠಲ ರಕ್ಷಿಸಬೇಕಾ ದಯೆ 5
********