Showing posts with label ಮಂತ್ರಿ ಮಚ್ಚರವನ್ನು ಮನದೊಳಗಿಟ್ಟು helavana katte. Show all posts
Showing posts with label ಮಂತ್ರಿ ಮಚ್ಚರವನ್ನು ಮನದೊಳಗಿಟ್ಟು helavana katte. Show all posts

Tuesday 1 June 2021

ಮಂತ್ರಿ ಮಚ್ಚರವನ್ನು ಮನದೊಳಗಿಟ್ಟು ankita helavana katte

 ಎರಡನೆಯ ಸಂಧಿ

ಮಂತ್ರಿ ಮಚ್ಚರವನ್ನು ಮನದೊಳಗಿಟ್ಟು

ಶ್ರೀಕಾಂತನ ಕರುಣವುಳ್ಳವಗೆ

ತಂತ್ರವ ಹೂಡಿ ಕೊಲ್ಲುವೆನೆಂದು ನೇಮಿಸಿ

ಕುಂತಳಪುರಕೆ ಕಳುಹಿದನು 1

ಅಕ್ಷರಾಭ್ಯಾಸವ ಮಾಡಬೇಕೆನುತ

ಗಂಧಾಕ್ಷತೆ ಫಲಪುಷ್ಪದಿಂದ

ಸಾಕ್ಷಾತು ಗಣಪತಿಗರ್ಪಿಸಿ ತರಳನ ಶಿಕ್ಷಾಗುರುವಿಗೆ ಒಪ್ಪಿಸಿದ2


ಮಣ್ಣ ಹರಹಿ ಅಕ್ಷರವ ಬರೆದು ಎನ್ನಣ್ಣನೀ ತಿದ್ದು ಬಾ ಎನಲು

ಪನ್ನಗಶಯನ ನಾರಾಯಣ ಹರಿಕೃಷ್ಣ

ಎನ್ನೊಡೆಯ ಶರಣೆಂದು ಬರೆದ 3

ಓನಾಮವ ಬರೆಯೆಂದರೆ ಬರೆಯದೆ

ಶ್ರೀನಾಥ ಶರಣೆಂದು ಬರೆದ

ನಾನೊಂದ ಹೇಳಲು ನೀನೊಂದ ಬರೆವೆ

ನಿನ್ನ e್ಞÁನ ಬೇರೆ ಚಿತ್ತ ಬೇರೆ 4

ಒಂದ ಹೇಳಿದರೊಂದ ಬರೆವೆಯಾದರೆ ನಿನ್ನ

ತಂದೆಗೆ ಒಯ್ದು ಒಪ್ಪಿಸುವೆ

ಕುಂದು ನಮ್ಮ ಮೇಲೆ ಇಡುವ ನಿಮ್ಮಯ್ಯನು

ಎಂದು ಧಿಕ್ಕರಿಸಿ ಹೇಳಿದನು 5

ನೀತೀಲಿ ಬರೆಯೆಂದರೆ ಬರೆಯದೆ ನಿನ್ನ

ಚಾತುರ್ಯದ ಬುದ್ಧಿ ಬೇರೆ

ಈತನ ತೊಡರು ನಮಗೆ ಬೇಡವೆಂದವರ

ತಾತಗೆ ಒಯ್ದು ಒಪ್ಪಿಸಿದ 6

ಹಿಂದಕ್ಕೆ ಹಿರಣ್ಯಕಶ್ಯಪ ತನ್ನ ತನಯ

ಮುಕುಂದನ ಭಜಕನೆಂದೆನದೆ

ಬಂಧಿಸಿ ಬಸುರ ಬಗಿಸಿಕೊಂಡಾತನ ಮನಸು

ಬಂದ ಹಾಂಗಿರಲೆಂದು ಸುತನ 7

ಧ್ರುವ ಪ್ರಹ್ಲಾದ ಅಕ್ರೂರಾಂಬರೀಷ ಮಾಧವ

ಮುರಾರಿಯನ್ನು ಭಜಿಸಿ

ದವರಿಗಿಂತುತ್ತಮ ಕುಮಾರನು ಇನ್ನು ಭವ

ಭಯಾದಿಗಳಿಲ್ಲ ನಮಗೆ 8

ಶ್ರೇಷ್ಠರೆಲ್ಲರು ಕೂಡಿ ಶುಭಲಗ್ನವನು

ಕಟ್ಟಿಕೊಟ್ಟರು ಕರಲೇಸು ಎನುತ

ಅಷ್ಟವರುಷದ ಕುಮಾರಗೆ ಮುಂಜಿಯ

ಕಟ್ಟೆದರ್ ವೇದೋಕ್ತದಲಿ 9

ವೇದಶಾಸ್ತ್ರ ಧನುರ್ವಿದ್ಯಾ ಸಾಧನೆಗಳ

ಓದಿಸಿದರು ಗುರುಮುಖದಿ

ಮಾಧವನಲ್ಲದೆ ಅನ್ಯತ್ರರಿಲ್ಲವೆಂದು ಭೇದಾಭೇದವನೆಲ್ಲ ತಿಳಿದು 10

ಎಳದುಳಸಿಯ ವನಮಾಲೆಯನೆ ಹಾಕಿ

ಹೊಳೆವ ಶ್ರೀ ಮುದ್ರಿಕೆಯಿಟ್ಟು

ನಳಿನನಾಭನ ಪೂಜೆಮಾಡುವ ಬನ್ನಿರೆಂದು

ಗೆಳೆಯರೆಲ್ಲರಿಗೆ ಬೋಧಿಸಿದ 11

ಪತಿತರಾದಪಗತಿ ಕುಮಾರರಿಗೆಲ್ಲ ಸದ್ಗತಿಯಾಗಬೇಕೆಂದೆನುತ

ಹಿತವ ಚಿಂತಿಸಿ ನಂಬಿದವರಿಗೇಕಾದಶಿ ವ್ರತವ

ಮಾಡಿಸಿದನಾಜೆÉ್ಞಯಲಿ 12

ಆ ದೇಶದೊಳಗಿರ್ದ ಜನರಿಗೆ ಪಣೆಯಲ್ಲಿ

ದ್ವಾದಶ ನಾಮವ ಹಚ್ಚಿ

ಸಾದಿ ಸಾಧಿಸಿರಿ ಏಕಾದಶಿ ವ್ರತವೆಂದು ಬೋಧಿಸಿದನು ಎಲ್ಲರಿಗೆ13

ಎಲ್ಲರು ಏಕಾದಶಿಯ ಜಾಗರ ಮಾಡಿ ಫುಲ್ಲನಾಭನ ಭಜಿಸುವರು

ಸೊಲ್ಲುಸೊಲ್ಲಿಗೆ ನಾರಾಯಣ ಹರಿಯೆಂಬೋದಲ್ಲದೆ

ಪರಗೋಷ್ಠಿಯಿಲ್ಲ 14

ಮಲೆತವರನು ಮುರಿದೊತ್ತಿ ಶಕ್ತಿಯಕೊನೆ

ಬೆಳೆಸುವ ಹÀರಿಭಕ್ತರೊಡನೆ

ಬಲವಂತ ಧರೆಯ ಗೆದ್ದು ಧರೆಯೊಳು ಬಹು

ಪರಾಕ್ರಮಿಯೆನಿಸಿದನು 15

ಶೂರತ್ವದಲಿ ತಂದೆಯಾಳುವ ರಾಜ್ಯವಯೆಂದರುಹಿ

ಇಮ್ಮಡಿಯನು ಗೆದ್ದು

ಊರ ತುರುವನೆಲ್ಲ ತಿರುಹಿ ಮಾಣಿಕ ಮುತ್ತು

ಹೇರಿಸಿದನು ತನ್ನ ಪುರಕೆ 16

ಕೆಂಧೂಳು ಸೂಸುತ ಬಂದ ಕುಮಾರಗೆ

ತಂದು ಆರತಿಗಳನೆತ್ತಿ

ಇಂದಿರೆ ಮಾತೆ ನಾರಾಯಣ ಪಿತನಹುದೆಂದು

ಚರಣಕ್ಕೆರಗಿದನು 17

ಅಗಣಿತ ಆಯುಷ್ಯವಂತನು ನೀನಾಗು

ಜಗದಧಿಪತಿಯಾಗು ಎಂದು

ಮಗನ ತಕ್ಕೈಸಿ ಮುಂಡಾಡಿ ಸಂತೋಷದಿ ಮಿಗೆ

ಹರುಷವನೆ ತಾಳಿದಳು 18

ಲೇಸಾದ ಶುಭಲಗ್ನವ ಕಟ್ಟಿ ಸುತನ ಸಿಂಹಾಸನದಲ್ಲಿ ಕುಳ್ಳಿರಿಸಿ

ಭೂಸುರ ಬಂಧುಗಳೆಲ್ಲರು ನೆರೆದಿಂದುಹಾಸಗೆ ಪಟ್ಟಗಟ್ಟಿದರು19

ಮಾತೆಪಿತರ ಮಾತುಮಂ ಮೀರಿ ನಡೆಯದೆ

ಅನಾಥರ ಪರಿ ಪಾಲಿಸುತ್ತ

ಪ್ರೀತಿಯಿಂದಲಿ ದೇವಬ್ರಾಹ್ಮರೊಡನೆ

ರಾಜ್ಯನೀತಿಯಿಂದಾಳುತಲಿಹನು 20

ಬಾಲಕ ಬಹುಪರಾಕ್ರಮಿ ಎನ್ನ ಮಾತ ನೀ

ಲಾಲಿಸು ಕುಂತಳೇಶ್ವರಗೆ

ಕಾಲಕಾಲಕೆ ಕಪ್ಪವ ಕೊಟ್ಟು ಬಹೆವು ಆಲಸ್ಯವಾಯಿತು ಎಂದ21

ಮೀರಬಾರದು ಪಿತನಾಜÉ್ಞÀಯೆಂದೆನುತ

ಉದಾರಬುದ್ಧಿಯಲಿಂದುಹಾಸ

ಯಾರ್ಯಾರಿಗೆ ಹೋಗಿ ಕೊಡಬೇಕು ಎನುತ

ವಿಚಾರಿಸಿದನು ತನ್ನಪಿತನ 22

ಕುಂತಳಪುರದರಸಗೆ ದುಷ್ಟಬುದ್ಧಿಯೆಂಬ ಮಂತ್ರಿ

ಜೋಯಿಸ ಪುರೋಹಿತಗೆ

ಕಾಂತಿಗೊಡದ ಕನಕಾಭರಣವೆಲ್ಲವ ಅಂತಸ್ಥದಿಂದ ಕಟ್ಟಿದನು23

ಆನೆ ಕುದುರೆ ಅರ್ಧಸೇನೆ ದಳವ ಕೊಟ್ಟು

ಜÁ್ಞನವುಳ್ಳ ಭೃತ್ಯರೊಡನೆ

ನೀವಿದ ಕುಂತಳೇಶ್ವರಗೆ ಕೊಟ್ಟು ಬನ್ನಿರೆಂದು

ದಾನವಾಂತಕನ ಕಿಂಕರನು 24

ಕರವ ಮುಗಿದು ಇಂದುಹಾಸನಪ್ಪಣೆಯಿಂದ

ತೆರಳಿದರಲ್ಲಿಂದ ಮುಂದೆ

ಭರದಿಂದ ಬಂದು ಬಿಟ್ಟುದು ದಂಡು ಕುಂತಳಪುರದ

ಹೆಬ್ಬಾಗಿಲ ಮುಂದೆ 25

ಪಟ್ಟಣದೊಳು ಬಂದು ಪಾಳಯವನೆ ಬಿಟ್ಟ

ದಿಟ್ಟರಾರೆಂದು ಕೇಳಿದನು

ಕೊಟ್ಟು ಕಪ್ಪವ ಕುಂತಳೇಂದ್ರಗೆ ಕೊಡಿರೆಂದು

ಅಟ್ಟಿದೆನ್ನೊಡೆಯ ಪುಳಿಂದ 26

ಎಂದ ಮಾತನು ಕೇಳಿ ಮಂತ್ರಿಗೆ ಪೇಳಲು

ಮಂದಿರಕಾಗಿ ಕರೆಸಿದ

ತಂದ ಕಪ್ಪವ ದುಷ್ಟಬುದ್ಧಿಯ ಮುಂದಿಟ್ಟು

ನಿಂದೆದ್ದು ಕರವ ಮುಗಿದರು 27

ಕಡೆಗಣ್ಣಲಿ ನೋಡಲಿಲ್ಲವರೊಳು ಮಾತನುಡಿಯದೆ ಸನ್ಮಾನಿಸದೆ

ತಡೆಯೇಕಿಷ್ಟು ದಿವಸವೆಂದು ಮಂತ್ರಿಯು ಜಡಿದು

ಝೇಂಕರಿಸಿ ಕೇಳಿದನು 28

ಜೀಯ ಹಸಾದ ನಿಮ್ಮಡಿಗೆ ಇಂದಿನ ವಾಯಿದ ಕಟ್ಟಿದ ಧನವು

ಆಯತವಾಗಿದೆ ಇಳುಹಿಸಿ ನೋಡಿರಿ

ದೇವರು ಕೈಕೊಂಬುದೆನಲು 29

ತೆಗೆಸಿದ ಮಂತ್ರಿಯು ಕುಶಲಗತಿಗಳಿಂದ ನಗ

ನಾಣ್ಯ ದೇವಾಂಗವನು

ತೆಗೆಸಿ ನೋಡಿದನು ಬಗೆಬಗೆ ಸಪ್ತಂಗಳ ನಗ

ನಾಣ್ಯ ದೇವಾಂಗವನು 30

ಮಗನ ಕರೆದು ಹೇಳಿದಿವರಿಗೆ ಭೋಜನ

ಸೊಗಸಾಗಿ ಮಾಡಿಸು ಎಂದ

ಬಗೆಬಗೆಯಿಂದಲಿ ತೃಪ್ತಾಗ ಬಡಿಸು ಎಂದು

ನಗೆಮುಖದಿಂದ ಹೇಳಿದನು 31

ಸಣ್ಣ ರಾಜಾನ್ನದಕ್ಕಿಯನ್ನ ಶಾಕವು ಅಣ್ಣೆವಾಲೆರೆದ ಪಾಯಸವು

ಬೆಣ್ಣೆಕಾಸಿದ ತುಪ್ಪ ಭಕ್ಷ್ಯಂಗಳನು ಮಾಡಿ

ಉಣ್ಣೇಳಿರೆಂದು ಕರೆದರು 32

ಅತಿದೈನ್ಯದಿಂದ ಹೇಳಿದರು ಏಕಾದಶಿ ವ್ರತ

ನಿರಾಹಾರವು ನಮಗೆ

ಚತುರತನವೇ ನಮ್ಮೊಡನೆ ಕಿರಾತನ ಮತವಿದು

ಎಂದು ಕೇಳಿದನು 33

ಹೆಮ್ಮೆ ನಿಮ್ಮೊಡನೆ ಮಾಡುವುದೇತಕೆ ಜೀಯ

ಎಮ್ಮೊಡೆಯನ ಸುಕುಮಾರ

ತಮ್ಮ ರಾಜ್ಯದಲ್ಲಿ ಏಕಾದಶಿವ್ರತ ನಿರ್ಮಾಣವನ್ನೆ ಮಾಡಿದನು34

ಎಲ್ಲಿಯ ಮಾತಿದು ಆತನ ಸತಿ ಬಂಜೆ

ಎಂದೆಲ್ಲರು ಹೇಳುತಲಿಹರು

ಅಲ್ಲದ ಮಾತಿದು ಅತಿ ಚೋದ್ಯವಾಗಿದೆ

ಎಲ್ಲಿದ್ದ ಆತಗೆ ಸುತನು 35

ದುಷ್ಟಮೃಗವನೆಚ್ಚು ಕೆಡಹುವೆನೆನುತ

ಹಿಂದಟ್ಟಿ ಹೋದನು ಪುಳಿಂದ

ಪುಟ್ಟ ಬಾಲಕ ನಾರಾಯಣ ಹರಿಯೆನುತ

ಅಟ್ಟಡವಿಯೊಳಗಿರಲು 36

ಆ ಶಿಶುವನೆ ತಂದು ಅತಿಶಯದಿಂದಲಿ

ಪೋಷಣೆಯನು ಮಾಡಿದರು

ವಾಸುದೇವನ ಕಿಂಕರ ಇಂದ್ರಹಾಸನು

ಭೂಸುರರನೆ ಪಾಲಿಸುವನು 37

ಎಂದ ಮಾತನು ಕೇಳಿ ಎದೆಯೊಳು ಅಲಗು

ನಟ್ಟಂದದಿ ಮನದೊಳು ಮರುಗಿ

ಅಂದು ಮಾಡಿದ ಕಾರ್ಯ ಆಗಲಿಲ್ಲವು ಸಿದ್ಧ

ಎಂದು ತಾ ಮನದೊಳು ತಿಳಿದ 38

ಮನುಜರೈತನದಿಂದಲೇನಹುದು ದೈವ

ಅನುಕೂಲವಾದ ಕಾರ್ಯವು

ನೆನೆದಂತೆ ಅಹುದೆನ್ನುತ ದುಷ್ಟಬುದ್ಧಿಯು

ಮನದಲ್ಲಿ ಚಿಂತೆ ಮಾಡಿದನು 39

ದ್ವಾದಶಿ ದಿವಸ ಪಾರಣೆಯ ಮಾಡಿಸಿ ಅವರಿಗಾದರಿಸಿ

(one or two lines incomplete?)

****