Showing posts with label ವಾದಿರಾಜರ ಪದವ ಸ್ಮರಿಸುವೆ others vadiraja stutih. Show all posts
Showing posts with label ವಾದಿರಾಜರ ಪದವ ಸ್ಮರಿಸುವೆ others vadiraja stutih. Show all posts

Friday, 27 December 2019

ವಾದಿರಾಜರ ಪದವ ಸ್ಮರಿಸುವೆ others vadiraja stutih

ವಾದಿರಾಜರ ಪದವ ಸ್ಮರಿಸುವೆ ಅ-
ಗಾಧ ಮಹಿಮರ ಸದಯ ಹೃದಯರ ||pa||

ಮೋದತೀರ್ಥರಾಗಮದ ಸಾರವ
ಸಾಧು ಜನರಿಗೆ ಬೋಧಿಸಿರ್ಪರ
ವಾದದಿಂದಲಿ ವೀರಶೈವರ
ಗೆದ್ದು ಮುತ್ತಿನ ಪೀಠವೇರ್ದರ ||1||

ಪಾದದಿಂದಲಿ ಸಕಲ ತೀರ್ಥವ
ಮೋದದಿಂದ ಚರಿಸಿ ತೀರ್ಥ ಪ್ರ-
ಬಂಧ ಗ್ರಂಥವ ರಚಿಸಿ ಮಾನ್ಯರಾ
ಗಿರ್ದ ಗುರುಗಳನೆಂತು ಬಣ್ಣಿಪೆ ||2||

ರಾಜಸಭೆಯೊಳು ರಾಜಭೀಷ್ಮಕ
ತನುಜೆಯರಸನ ಸ್ತುತಿಪ ಕಾವ್ಯವ
ಈ ಜಗತ್ತಿನೊಳ್ ಶ್ರೇಷ್ಠ ಕಾವ್ಯವೆಂ
ದಿದನೆ ಗಜದೊಳು ಮೆರೆಸಿದರಸನು ||3||

ಒಂದುನೂರ ಇಪ್ಪತ್ತು ವರ್ಷದೊಳ್
ಸಿಂಧುಶಯನನ ಸೇವಿಸುತ್ತಲಿ
ಇಂದ್ರದತ್ತ ವಿಮಾನದಿಂದಲಿ
ಸತ್ಯಲೋಕವನೈದಿದ ಗುರುವರ ||4||

ಯುಕ್ತಿಮಲ್ಲಿಕಾ ಗ್ರಂಥದಿಂದ
ರಾಜೇಶ ಹಯಮುಖಾನಂತ ಗುಣಗಳ
ಪೊಗಳುತಿರ್ಪರ ರಾಗಶೂನ್ಯರ
ಋಜು ಗಣೇಶರ ಸುಜ್ಞಾನ ಪೂರ್ಣರ ||5||
********