Showing posts with label ಗುಬ್ಬಿಯಾಳೊ ಗೋವಿಂದ ಗೋವಿಂದಾ ಗೋವಿಂದಾನೆಂದು hayavadana GUBBIYAALO GOVINDA GOVINDA GOVINDANENDU. Show all posts
Showing posts with label ಗುಬ್ಬಿಯಾಳೊ ಗೋವಿಂದ ಗೋವಿಂದಾ ಗೋವಿಂದಾನೆಂದು hayavadana GUBBIYAALO GOVINDA GOVINDA GOVINDANENDU. Show all posts

Sunday 7 November 2021

ಗುಬ್ಬಿಯಾಳೊ ಗೋವಿಂದ ಗೋವಿಂದಾ ಗೋವಿಂದಾನೆಂದು ankita hayavadana GUBBIYAALO GOVINDA GOVINDA GOVINDANENDU



ಗುಬ್ಬಿಯಾಳೊ ಗೋವಿಂದ ಗೋವಿಂದಾ |
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ||ಪ||

ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ||೧||

ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ||೨||

ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ||೩||

ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ||೪||

ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ||೫||

ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ||೬||

ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ||೭||

ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||೮||

ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ||೯||

ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ||೧೦||

ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ||೧೧||

ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ||೧೨||

ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ||೧೩||

ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ
ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ||೧೪ ||
***

Gubbiyalo govinda govinda |
Govinda govindanemdu neneyiro gubbiyalo ||pa||

Kesavanna nenedare klesa pariharavu gubbiyalo
Narayanana dhyanadinda narakabayavillavo gubbiyalo ||1||

Madhavanna nenedare manobishta koduvonu gubbiyalo
Govindanna dayadinda goradurita nasanavu gubbiyalo ||2||

Vishnubajaneyilladavage vaishnavara janmavunte gubbiyalo
Madhusudanana dhyanadinda atisayavu ihudo gubbiyalo ||3||

Trivikramana nenedare savitriyagiharo gubbiyalo
Vamanadevaru namage varagala koduvoru gubbiyalo ||4||

Sridharanna nenedare siri namage olivalo gubbiyalo
Hrushikesana dhyanadinda hrudaya parisuddhavo gubbiyalo ||5||

Padmanaba nammellara palisi rakshipano gubbiyalo
Damodarana nenedare pamaratva bidisuvano gubbiyalo ||6||

Sankarshanana dhyanadinda santana abivruddhiyu gubbiyalo
Vasudevana dayadinda vamsa uddharavo gubbiyalo ||7||

Pradyumnana nenedare bupradakshine Palavu gubbiyalo
Aniruddhana sevise punitarahevo gubbiyalo ||8||

Purushottamanna puranapurushanemdu tiliyiro gubbiyalo
Adhokshaja nammellarigadharavagihano gubbiyalo ||9||

Narasimhadevaru namma kuladaivavo gubbiyalo
Acyuta lakshmiya kudi saccidanamdano gubbiyalo ||10||

Janardanadevaru jagakella sreshtharo gubbiyalo
Upendranu namma aparadhava kshamisuvano gubbiyalo ||11||

Harinamamrutake sari dhareyolage illavo gubbiyalo
Srikrushna rangesayembo siddhakriya ballare gubbiyalo ||12||

I gubbi paduvarige iha paravu santatavu gubbiyalo
Dharaniyolu acandrarka tarakavagiharu gubbiyalo ||13||

Hayavadananna padadhyana nitya mareyade ni nene manave
Namma hayavadananna padave nitya manave gubbiyalo ||14 ||
***