ಬಲಗೊಂಬೆ ಚನ್ನರಾಯ ಭಕ್ತರ ಪ್ರಿಯ ||ಪ||
ವೇದವಾದಗಳಲ್ಲಿ ಕಾಡುವ ಜನರಲ್ಲಿ
ಓದುವ ವಿದ್ಯೆಗಳಲ್ಲಿ ವಾದವ ಗೆಲಿಸಯ್ಯ ||೧||
ಆರು ವೈರಿಗಳಲ್ಲಿ ಅಷ್ಟ ಗಜಂಗಳಲ್ಲಿ
ಮೂರು ಏಳರಲ್ಲಿ ಮುಂದೆ ನೀ ಗೆಲಿಸಯ್ಯ ||೨||
ಪರಮ ಭಕ್ತಿಯೊಳ್ನಿನ್ನ ಚರಣ ಕೆರಗುವ ಮುನ್ನ
ಸಿರಿಯ ಪಾಲಿಪ ಚನ್ನ ವರದ ಕೇಶವ ರನ್ನ ||೩||
***
Balagombe channaraya bhaktara priya ||pa||
Vedavadagalalli kaduva janaralli
oduva vidyegalalli vadava gelisayya ||1||
Aru vairigalalli asta gajangalalli
muru elaralli munde ni gelisayya ||2||
Parama bhaktiyolninna charana keraguva munnaa
siriya palipa channa varada keshava ranna ||3||
***
ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ ಪ
ವೇದ ವಾದಗಳಲ್ಲಿ | ಕಾಡುವ ಜನರಲ್ಲಿಓದುವ ವಿದ್ಯೆಗಳಲ್ಲಿ | ವಾದವ ಗೆಲಿಸಯ್ಯ 1
ಆರು ವೈರಿಗಳಲ್ಲಿ | ಅಷ್ಟ ಗಜಂಗಳಲ್ಲಿಮೂರು ಏಳರಲ್ಲಿ | ಮುಂದೆ ನೀ ಗೆಲಿಸಯ್ಯ2
ಪರಮ ಭಕ್ತಿಯೊಳ್ನಿನ್ನ | ಚರಣಕೆರಗುವೆ ಮುನ್ನಸಿರಿಯ ಪಾಲಿಪ ಚೆನ್ನ | ವರದ ಕೇಶವ ರನ್ನ3
***