Showing posts with label ಇಂದು ಎನ್ನ ಜನುಮ ಸಾಫಲ್ಯವಾಯಿತು mahipati. Show all posts
Showing posts with label ಇಂದು ಎನ್ನ ಜನುಮ ಸಾಫಲ್ಯವಾಯಿತು mahipati. Show all posts

Wednesday, 11 December 2019

ಇಂದು ಎನ್ನ ಜನುಮ ಸಾಫಲ್ಯವಾಯಿತು ankita mahipati

ಭೈರವಿ ರಾಗ ದಾದರಾ ತಾಳ

ಇಂದು ಎನ್ನ ಜನುಮ ಸಾಫಲ್ಯವಾಯಿತು
ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ||ಧ್ರುವ||

ಭಾನುಕೋಟಿ ತೇಜವಾಗಿ ರೂಪುದೋರಿತು
ತಾನೆ ತನ್ನಿಂದೊಲಿದು ದಯವ ಬೀರಿತು
ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು
ನಾನು ನೀನು ಎಂಬುವ ಅಹಂಭಾವ ಹರಿಯಿತು ||೧||

ಎಂದು ಇಂದಿರೇಶನ ಕಾಣದ ಕಣ್ಣುದೆರೆಯಿತು
ಬಂದು ಬೀಳುವ ಭವಪಾಶದ ಬಲಿಯು ಹರಿಯಿತು
ಚಂದವಾಗಿ ಸದ್ಗುರು ಕರುಣ ಮಳೆಯಗರೆಯಿತು
ಹೊಂದಿ ಹರುಷಪಡುವಾನಂದ ಪಥವುದೋರಿತು ||೨||

ಭಿನ್ನವಿಲ್ಲದೆ ಸಹಸ್ರದಳದಲ್ಯಾಡುವ ಹಂಸನ
ಕಣ್ಣು ಕಂಡು ಪಾವನವಾಯಿತು ವಾಸುದೇವನ
ಎನ್ನ ಮನಸಿನಂತಾಯಿತು ಪುಣ್ಯ ಜೀವನ
ಧನ್ಯಗೈಸಿತು ಮಹಿಪತಿ ಪ್ರಾಣಜೀವನ ||೩|
*******

ಕೃತಿ ಕಾಖಂಡಕಿ ಶ್ರೀ ಮಹಿಪತಿರಾಯರು

ಇಂದು ಎನ್ನ ಜನುಮ ಸಾಫಲ್ಯವಾಯಿತು | ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ಧ್ರುವ 


ಭಾನುಕೋಟಿ ತೇಜವಾಗಿ ರೂಪದೋರಿತು ತಾನೆ ತನ್ನಿಂದೊಲಿದು ದಯವು ಬೀರಿತು ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು ನಾನು ನೀನು ಎಂಬ ಅಹಂಭಾವ ಹರಿಯಿತು 1 

ಎಂದು ಇಂದಿರೇಶನ ಕಾಣದ ಕಣ್ಣದೆರೆಯಿತು ಬಂದು ಬೀಳುವ ಭವಪಾಶದ ಬಲಿಯು ಹರಿಯಿತು ಚಂದವಾಗಿ ಸದ್ಗುರು ಕರುಣ ಮಳೆಯು ಗರೆಯಿತು ಹೊಂದಿ ಹರುಷ ಪಡುವಾನಂದ ಪಥವು ದೋರಿತು 2 

ಕಣ್ಣು ಕಂಡು ಪಾವನವಾಯಿತು ವಾಸುದೇವನ ಎನ್ನ ಮನಸಿನಂತಾಯಿತು ಪುಣ್ಯಸಾಧನೆ ಧನ್ಯಗೈಸಿತು ಮಹಿಪತಿ ಪ್ರಾಣಜೀವನ 3

***