Showing posts with label ಏಳಯ್ಯ ರಾಕ್ಷಸಾಂತಕ ದನುಜಸಂಹಾರ devapura lakshmikanta. Show all posts
Showing posts with label ಏಳಯ್ಯ ರಾಕ್ಷಸಾಂತಕ ದನುಜಸಂಹಾರ devapura lakshmikanta. Show all posts

Monday, 2 August 2021

ಏಳಯ್ಯ ರಾಕ್ಷಸಾಂತಕ ದನುಜಸಂಹಾರ ankita devapura lakshmikanta

ಏಳಯ್ಯ ರಾಕ್ಷಸಾಂತಕ ದನುಜಸಂಹಾರ ಪ


ಏಳಯ್ಯ ರಾಜೀವನಯನ ನವನೀತಚೋರ

ಏಳು ಲಕ್ಷ್ಮೀಮನೋಹರ ಹರಿಯೆ ಅ.ಪ


ದಿನಪನುದಯಂಗೆಯ್ಯೆ ದಿಕ್ಪಾಲಕರ್ನೆರೆಯೆ

ಕನಕಭೂಷಣದ ಕಾಂತೆಯರು ಆರತಿಪಿಡಿಯೆ

ಅನುಪಮಗೆ ಜಯವೆಂದು ಬಂದು ನಿಂದೈದಾರೆ

ಇನಕುಲನೆ ನಲಿದುಪ್ಪವಡಿಸು ಶ್ರೀಹರಿಯೇ 1


ಪ್ರಹ್ಲಾದ ನಾರದರು ವಾಸಿಷ್ಠ ವಿಶ್ವಾಮಿತ್ರರು

ಮಹಮುನಿಗಳತ್ರಿ ಭಾರದ್ವಾಜ ಜಮದಗ್ನಿ ಗೌತಮರು

ಬಹುವಿಧದಿ ಕಶ್ಯಪರು ಹನುಮಂತ ತುಂಬುರರು

ಹರುಷದಿ ಪಾಡುತ್ತಲೈದಾರೆ ಇನಕುಲನೆ ನಲಿದು 2


ದೇವಗಂಗೆಯಕೊಂಡು ದೇವರ್ಕಳೈದಿದರು

ದೇವತಾವಳಿ ಬಂದು ದೇವ ಜಯವೆನುತಿಹರು

ದೇವಪುರದಲಿ ನಿಂದ ದೇವಕಿಯ ವರಕಂದ

ದೇವ ಲಕ್ಷ್ಮೀಪತಿಯ ದೇವ ನೀನೇಳೈ ಹರಿಯೇ 3

****