Showing posts with label ಕಾಯೋ ಎನ್ನನು ಗುರುರಾಯರಾಘವೇಂದ್ರ hanumayya. Show all posts
Showing posts with label ಕಾಯೋ ಎನ್ನನು ಗುರುರಾಯರಾಘವೇಂದ್ರ hanumayya. Show all posts

Monday, 6 September 2021

ಕಾಯೋ ಎನ್ನನು ಗುರುರಾಯರಾಘವೇಂದ್ರ ankita hanumayya

 kruti ಹನುಮನಯ್ಯ 

ರಾಗ: ಆರಭಿ  ತಾಳ: ಅಟ


ಕಾಯೋ ಎನ್ನನು ಗುರುರಾಯರಾಘವೇಂದ್ರ 

ಜೀಯ ಬೇಡುವೆ ದಯದಿ 


ವಾಯುಮತದಿ ಜ್ಞಾನವೀಯೋ ತವಚರಣ

ತೋಯಜಕೆರಗುವೆನೊ ನಾನು  ಅ. ಪ


ಪವನಮತವನಿಂದಿಸುವರ ಮುರಿದು ಸುಗ್ರಂ-

ಥವೆನಿಪ ಪರಿಮಳವ

ತವಕದಿರಚಿಸುತೆ ಭುವನದೊಳಗೆ ದ್ವೈ-

ತವೆ ನಿಜವೆನಿಸಿರುವೆ ಏ ಗುರುವೆ  1

ರಾಘವಭಕ್ತ ಸರ್ವರೋಗಹರನೆ ಭವ

ರೋಗ ಬಿಡಿಸಿ ಪೊರೆಯೊ

ಮೂಗನ ವಾಗ್ಮಿಯ ಮಾಡಿದವನೆ ಶಿರ

ಬಾಗುವೆ ಚರಣದೊಳು ಕೃಪಾಳು  2

ಜನುಮಜನುಮದೊಳು ಎನಗಿದೆ ಪಾಲಿಸೋ

ನಿನಗೆ ಶರಣೆನ್ನುವೆನೊ

ಹನುಮನಯ್ಯನಪದವನಜಭೃಂಗನೆ ಮಾರು-

ತನಮತದೊಳು ಸ್ಥಿರವ ಏದೇವ  3

***