ಯಾಕೆ ಬಾರನಕ್ಕಯ್ಯ ಎನ್ನಯ
ಪ್ರಾಣನಾಥನ ಕರೆತಾರೆ ಸೈರಿಸಲಾರೆ ಪ.
ಸೋಗೆಗಂಗಳ ಸನ್ನೆ ಮಾಡಿ ಪೊಳೆದು ಪೋದ
ಮೇಘದ ಮಿಂಚಿನಂತೆ ಮಂದರೋದ್ಧಾರ
ಬಾಗಿದ ಮುಖವೆತ್ತಿ ಎನ್ನ ನೋಡದೆ ಪೋದ
ಈಗಲವನ ಮನಸ್ಯೆರಡಂಗವಾಗಿದೆ
ಹ್ಯಾಂಗ ಮಾಡಲಿ ಸಖಿಯೆ ಹೇಳಲಿ ಪ್ರಿಯೆ 1
ಕರವೊಡ್ಡಿ ಬೇಡಿಕೊಂಡರೆ ಒಲ್ಲದೆ ಪೋದ
ಕರೆದರೆ ಪಿತನಾಜ್ಞೆ ತೋರುತಾನೆ
ನಿರುತದಿ ಏಕಪತ್ನಿಯ ವ್ರತನೆನುತ
ಸರಿಬಂದ ಸತಿಯರ ಒಡನಾಡುತೈದಾನೆ
ಗರುವತನವ ಬಿಡನೆ ಗೋವ ಕಾಯ್ವವನೆ 2
ಸುಮ್ಮನೆ ಲಜ್ಜೆಭಂಗವ ಮಾಡಿ ಪೋದನೆ
ಒಮ್ಮೆ ಮನೆಗೆ ಬಾರನೆ ವಾಜಿವಾಹನನೆ
ತಮ್ಮ ಧ್ಯಾನದೊಳೆನ್ನ ಮನಸು ನಿಲ್ಲಿಸಿ ಪರ-
ಬೊಮ್ಮ ಮೂರುತಿ ಹೆಳವನಕಟ್ಟೆರಂಗನ
ಘಮ್ಮನೆ ಕರೆದುತಾರೆ ಸೈರಿಸಲಾರೆ 3
***