Showing posts with label ಶ್ರೀಮಧ್ವರಾಯರ ಸೇವೆ purandara vittala madhwacharya stutih. Show all posts
Showing posts with label ಶ್ರೀಮಧ್ವರಾಯರ ಸೇವೆ purandara vittala madhwacharya stutih. Show all posts

Friday 27 December 2019

ಶ್ರೀಮಧ್ವರಾಯರ ಸೇವೆ ದೊರಕುವದು purandara vittala madhwacharya stutih

ರಾಗ ಮೋಹನ. ತ್ರಿಪುಟ ತಾಳ

ಶ್ರೀಮಧ್ವರಾಯರ ಸೇವೆ ದೊರಕುವದು
ಜನುಮ ಸಫಲ ಕಾಣಿರೋ
ಶ್ರೀಮದಾನಂದತೀರ್ಥರ ಪಾದ ನೆನೆವರು
ಸಾಮಾನ್ಯ ಸುರರು ಕಾಣೆ ಬೊಮ್ಮನ ಆಣೆ ||ಪ||

ಜಗವು ಸತ್ಯವ ಅಲ್ಲ ಜಡಜೀವ ಭೇದವಿಲ್ಲ

ಅಗುಣನು ಪರ ಬೊಮ್ಮನು
ಹೀಗೇ ನುಡಿದ ಜನರ ನಿಗಮ ಶಾಸ್ತ್ರದಿ ಗೆದ್ದು
ಜಗ ಸತ್ಯ ಸಗುಣೋದ ಬ್ರಹ್ಮ ಎಂದು ಪೇಳುವ ||

ಹರಿ ಸರ್ವೋತ್ತಮ ತರುವಾಯ ರಮಾದೇವಿ

ಸರಸಿಜಾಸನ ಪ್ರಾಣರು
ಸರಸ್ವತೀಭಾರತಿಯೆಂದು ಪೇಳ್ದಾ ಗರುಡಾನಂತ ರುದ್ರ
ತರುವಾಯ ಆರು ದೇವಿಗಳು ||

ಸೌಪರ್ಣಿ ವಾರುಣಿ ಅನಪೂರ್ಣೆಯರು ಸಮರು

ದ್ವಿಪದೀಮನ್ವಾದಿ ದೇವಿಗಳು
ಈ ಪರಿ ತಾರತಮ್ಯ ಜಪಧ್ಯಾನಾರ್ಚನೆಯಿಂದ
ಅಪವರ್ಗಾದಿ ಸೇವೆಯ ಮಾಡಿರೋ ಎಂತೆಂಬ ||

ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿ

ಚೆಂದದಿಂದಲಿ ಲಾಲಿಸಿ
ಇಂದಿರಾರಮಣ ಗೋವಿಂದನೇ ದೈವವೆಂದು
ಸಂದೇಹವಿಲ್ಲದೆ ಸಾಧಿಸಿ ಮಾಯಾ ಸೋಲಿಸಿ ||

ಭೂತದೊಳು ರೌಪ್ಯಪುರದಿ ನೆಲಸಿ ಗೆದ್ದು

ಧಾತ್ರೀ ಮುದ್ರೆಯ ತೋರಿಸಿ
ಈತನೇ ಹನುಮಂತ ಭೀಮೇಶ ಶ್ರೀಮಧ್ವ
ಈತನೇ ಭಾವಿ ಬ್ರಹ್ಮಾ ಜೀವರುತ್ತಮ ||

ಹಿಮಸೇತುಪರಿಯಂತುದ್ಭವಿಸಿದ ಸುಜನರ್ಗೆ

ಕ್ರಮದಿ ತತ್ವವ ಬೋಧಿಸಿ
ಕ್ರಮನೇಮಂಗಳ ಮಾಡಿ ಕಮಲನಾಭನ ಮೂರ್ತಿ
ಪ್ರೇಮದಿಂದಲಿ ಸ್ಥಾಪಿಸಿ ಪೂಜಿಸಿರೆಂದು ||

ಶ್ರೀಮದನಂತನೆ ಅನಂತಕಾಲಕೆಯೆಂದು

ಯಮಕಭಾರತ ತೋರಿಸಿ
ಸ್ವಾಮಿ ಸರ್ವಾಂತರ್ಯಾಮಿ ಸರ್ವಗುಣಪೂರ್ಣನೆಂದು
ಪ್ರೇಮಿ ಪುರಂದರವಿಠಲನಾ ದಾಸರಾದನಾ ||
***


Shri madhva rayara seve dorakuvadu januma saphala kaniro
Shrimad Ananda tirttara pada nenavaru samanya suraru karunya bommana Ane

Jagadu satyava alla jada jiva bhedavalla agunanu para bommanu
hige nudida janara nigama shastradi geddu jaga satya saguna brahma endu peluva

hari sarvottama nitya taruvaya ramadevi sarasijasana pranaru
sarasvati bharati garuda ananta rudra taruvaya Aru devigalu

sauparni varuni devi aparna deviyaru samaru dvipadi manvadigalu
I pari taratamya japa dhyanarcaneyinda apavargadi seveya madiro entemba

ondondu yugadali ananta sevaya madi cendadindali lalisi
indira ramana govindane daivavendu sandehavillade sathiyi mayi solisi

bhutadolu relappa puradi nelasi geddu dhatri mudreya torisi
idena hanumanta idena bhimasena idena bhavisyada brahma jivottama

hima giriyinda setuveya paryantara bhramisuta sujanarige
krama tatva bodhisi kamala nabhana murti kramavaridu sthapisi pujitarenda

shrimadanantana ananta kalakeyendu ymaka bharata torisi
svami sarvantaryami srvaguna purnanendu premi purandara vittalana dasanada
***

pallavi

shrI madhva rAyara sEve dorakuvadu januma saphala kANirO

anupallavi

shrImad Ananda tIrttara pAda nenavaru sAmAnya suraru kAruNya bommana Ane

caraNam 1

jagadu satyava alla jaDa jIva bhEdavalla aguNanu para bommanu
hIgE nuDida janara nigama shAstradi geddu jaga satya saguNa brahma endu pELuva

caraNam 2

hari sarvOttama nitya taruvAya ramAdEvi sarasijAsana prANaru
sarasvati bhArati garuDa ananta rudra taruvAya Aru dEvigaLu

caraNam 3

sauparNi vAruNi dEvi aparNA dEviyaru samaru dvipadi manvAdigaLu
I pari tAratamya japa dhyAnArcaneyinda apavargAdi sEveya mADirO entemba

caraNam 4

ondondu yugadali ananta sEvaya mADi cendadindali lAlisi
indirA ramaNa gOvindanE daivavendu sandEhavillade sAthiyi mAyi solisi

caraNam 5

bhUtadoLu reLappa puradi nelasi geddu dhAtrI mudreya tOrisi
IdEna hanumanta IdEna bhImasEna IdEna bhaviSyada brahma jIvOttama

caraNam 6

hima giriyinda sEtuveya paryantara bhramisuta sujanarige
krama tatva bOdhisi kamala nAbhana mUrti kramavaridu sthApisi pUjitarenda

caraNam 7

shrImadanantana ananta kAlakeyendu ymaka bhArata tOrisi
svAmi sarvAntaryAmi srvaguNa pUrNanendu prEmi purandara viTTalana dAsanAda
***

ಪುರಂದರದಾಸರು
ಶ್ರೀ ಮಧ್ವರಾಯರ ಸೇವೆ ದೊರಕುವುದು ಜನುಮ ಸಫಲ ಕಾಣಿರೋ ಪ

ಶ್ರೀಮದಾನಂದ ತೀರ್ಥರ ಪಾದವ ನೆನೆವರುಸಾಮಾನ್ಯಸುರರುಕಾಣಿ-ಬೊಮ್ಮನಆಣಿಅ.ಪ

ಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲಅಗುಣನು ಪರಬೊಮ್ಮನು-||ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದುಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ 1

ಹರಿಸರ್ವೋತ್ತಮನಿತ್ಯತರುವಾಯ ರಮಾದೇವಿತರುವಾಯ ವಿಧಿಪ್ರಾಣರುಸರಸ್ವತಿಭಾರತಿಗರುಡ ಅನಂತ ರುದ್ರತರುವಾಯ ಆರು ದೇವಿಗಳು 2

ಸೌಪರ್ಣಿವಾರುಣಿದೇವಿ ಅಪರ್ಣಾದೇವಿಯರು ಸಮರುದ್ವಿಪದಿ ಮನ್ವಾದಿಗಳು ||ಈಪರಿತಾರತಮ್ಯ ಜಪ-ಧ್ಯಾನಾರ್ಚನೆಯಿಂದಅಪವರ್ಗದನ ಸೇವೆಯ ಮಾಡಿರೊ ಎಂಬ 3

ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿಚೆಂದದಿಂದಲಿ ಲಾಲಿಸಿ ||ಇಂದಿರಾರಮಣ ಗೋವಿಂದನೇ ದೈವವೆಂದು |ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ 4

ಹಿಮಗಿರಿಯಿಂದ ಸೇತುವೆಯ ಪರ್ಯಂತರಭ್ರಮಿಸುತ ಸುಜನರಿಗೆ ||ಕ್ರಮತತ್ತ್ವ ಬೋಧಿಸಿ ಕಮಲನಾಭನಮೂರ್ತಿಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ 5

ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದುಧಾತ್ರೀ ಮುದ್ರೆಯ ತೋರಿಸಿ ||ಈತನೇ ಹನುಮಂತ ಈತನೇ ಭೀಮಸೇನಈತನೇ ಭವಿಷ್ಯದ ಬ್ರಹ್ಮಜೀವೋತ್ತಮ6

ಶ್ರೀಮದನಂತನೆ ಅನಂತಕಾಲಕೆಯೆಂದುಯಮಕ ಭಾರತ ತೋರಿಸಿಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದುಪ್ರೇಮಿಪುರಂದರವಿಠಲನ ದಾಸನಾದ7

*******