Showing posts with label ಹನುಮ ಭೀಮ ಮಧ್ವಮುನಿಯೆ ರಕ್ಷಿಸೆನ್ನ ಅನುದಿನವು ಶ್ರೀ ಹರಿಯ kamalanabha vittala. Show all posts
Showing posts with label ಹನುಮ ಭೀಮ ಮಧ್ವಮುನಿಯೆ ರಕ್ಷಿಸೆನ್ನ ಅನುದಿನವು ಶ್ರೀ ಹರಿಯ kamalanabha vittala. Show all posts

Thursday 5 August 2021

ಹನುಮ ಭೀಮ ಮಧ್ವಮುನಿಯೆ ರಕ್ಷಿಸೆನ್ನ ಅನುದಿನವು ಶ್ರೀ ಹರಿಯ ankita kamalanabha vittala

..

kruti by Nidaguruki Jeevubai


ಹನುಮ ಭೀಮ ಮಧ್ವಮುನಿಯೆ ರಕ್ಷಿಸೆನ್ನ

ಅನುದಿನವು ಶ್ರೀ ಹರಿಯ ಸ್ಮರಣೆ ಮರೆಯದಂತೆ ಪ


ತಂದೆ ತಾಯಿ ನೀನೆಂದು ನಂಬಿದೆನೊ

ಬಂಧ ಬಿಡಿಸಿ ಕಾಯೋ ತಂದೆ ಹನುಮವೀರ 1

ದುರುಳ ದೈತ್ಯನಾದ ಜರೆಯ ಸುತನ ಸೀಳಿ

ಕರುಣಿ ಕೃಷ್ಣನಂಘ್ರಿ ನಿರುತ ಭಜಿಪ ವೀರ 2

ಸದ್ವೈಷ್ಣವರನೆಲ್ಲ ಉದ್ಧರಿಸಿ ಜಗದಿಮುದ್ದು 

ಕಮಲನಾಭ ವಿಠ್ಠಲನಂಘ್ರಿ ಭಜಿಪ3

***