Showing posts with label ಸುಂದರಿಯರೆಲ್ಲರು ಇಂದಿರೇಶನ ಪಾಡಿಚಂದಾಗಿ ankita. Show all posts
Showing posts with label ಸುಂದರಿಯರೆಲ್ಲರು ಇಂದಿರೇಶನ ಪಾಡಿಚಂದಾಗಿ ankita. Show all posts

Monday 18 November 2019

ಸುಂದರಿಯರೆಲ್ಲರು ಇಂದಿರೇಶನ ಪಾಡಿಚಂದಾಗಿ ankita ramesha

by ಗಲಗಲಿಅವ್ವನವರು
ಸುಂದರಿಯರೆಲ್ಲರು ಇಂದಿರೇಶನ ಪಾಡಿಚಂದಾಗಿ ಕೋಲಹಾಕಿರೆಂದಳು ಕುಂತಿ ಪ.

ವ್ಯಾಳಾಶಯನನ ಕೂಡಭಾಳಸರಸವೆಕೇಳಯ್ಯ ಕರೆ ಎಂದು ಹೇಳಿದಳು ಕುಂತಿ 1

ಕೃಷ್ಣರಾಯನ ಕೂಡ ಇಷ್ಟೊಂದು ಸರಸವೆಧಿಟ್ಟರಿಗೆ ಬುದ್ಧಿಕೊಟ್ಟಳು ಕುಂತಿ 2

ತಂದೆ ರಂಗನ ಕೂಡ ಚಂದವೆ ಸರಸವುಮುಂದ್ಹೋಗಿ ಕರೆ ಎಂತೆಂದಳು ಕುಂತಿ 3

ಒಡೆಯ ರಂಗನ ಕೂಡ ಬಿಡುವುದೆ ಸರಸವುನಡೆದ್ಹೋಗಿ ಕರೆ ಎಂತೆಂದಳು ಕುಂತಿ 4

ಸ್ವಾಮಿ ರಾಮೇಶನ ಪ್ರೇಮದಿ ಕರೆ ಬಾಲೆರಾಯನ ಸಹಿತಕಾಮಿನಿಕುಂತಿ5
*****