..
kruti by ಲಕ್ಷ್ಮೀನಾರಯಣರಾಯರು Lakshminarayanaru
ಮೂರುತಿಯ ತೋರೋ ಮಾರುತಿ
ಧಾರುಣಿಯೊಳ್ ನೀನೇ ಗತಿಪ
ಅಂಜನಾ ಸುಕುಮಾರ ಕಂಜಾಕ್ಷ ಕಿಂಕರ
ಸಂಜೀವ ಗಿರಿಧರ ಅಂಜಿಕೆಯ ಕಳೆವ ಧೀರ 1
ಎರೆಡು ದಳದವರ ಕರೆದು ಕೌರವನುರ
ಇರಿದು ಕರುಳಸರ ವರಸತಿಗಿತ್ತ ಧೀರ 2
ಕಾಕು ಮಾಯ್ಗಳ ಮತ ನೂಕಿ ಬಿಸಾಡುತ
ಶ್ರೀಕಾಂತ ಸನ್ಮತ ಕೈಗೊಂಡು ನಿಲಿಸಿದಂಥ 3
***