..
ನಿನ್ನ ಧ್ಯಾನವ ಮಾಡುತ್ತ ಮಾಡುತ್ತ
ಎನ್ನ ಮನ ಅನ್ಯಕ್ಕೆರಗುತ್ತಿದೆ ಪ
ಪತಿ ಅಂಗ ಸಂಗದೊಳಿರುತಿದ್ದು ಇದ್ದುಸತಿ ಉಪಪತಿಯನ್ನು ಬಯಸುವಂತೆಶ್ರುತಿ ತತ್ವ ಶಾಸ್ತ್ರಗಳರಿತಿದ್ದು ಇದ್ದು ದು-ರ್ಮತಿ ದುಷ್ಟ ಚರಿತೆಗೆ ಎಳೆಯುತಿದೆ ಎನ್ನ1
ಪರಮಾನ್ನವನು ನಿತ್ಯ ಉಣುತಿದ್ದು ಇದ್ದುಸುರೆಯ ಚಿಂತಿಸಿ ರುಚಿಗೊಳ್ಳುವಂತೆಕರಿ-ಸುರನದಿಯಲ್ಲಿ ಮೀಯುತಿದ್ದು ಇದ್ದುಪರಮ ಹರುಷದಿ ಕೆಸರ ಚೆಲ್ಲಿಕೊಂಬಂತೆ 2
ಪರಮ ಪಾವನ ಗುಣಪೂರ್ಣನೆ ನಿನ್ನಚರಣಯುಗಳವನ್ನು ಧ್ಯಾನಿಸುತನೆರೆಹೊರೆಯಲಿ ಮನ ಹೋಗದಂದದಲಿಕರುಣಿಸಿ ನಿಲ್ಲಿಸೊ ಸಿರಿಕೃಷ್ಣರಾಯ 3
***