ರಂಗ ಬಾರೋ ಪಾಂಡುರಂಗ ಬಾರೋ ಮಂಗಳಾಂಗನೆ ನೀ
ಬಾರೋ| ಕಂಗಳಿಗಾನಂದ ನೀಡುತ ಬಾರೋ ಭಂಗಗಳ
ಕಳೆದು ಸಲಹಲು ಬಾರೋ||ಪಲ್ಲ||
ಭೀಮನದಿಯತೀರ ವಾಸನೆ ಬಾರೋ ಕಾಮಜನಕನೆ ನೀ ಬಾರೋ| ಕಾಮಿತಾರ್ಥಗಳ ನೀಡಲು ಬಾರೊ |ಕಾಮಕ್ರೋಧ
ಗಳ ಬಿಡಿಸುವ ಬಾರೋ||೧||
ಬುಕ್ಕಿಟ್ಟು ತುಳಸಿ ಮಾಲೆ ಹಾಕುವೆವೆ ಬಾರೋ|ಅಪ್ಪಿದ್ದರೆ
ಸಾರೋಪ್ಯ ಕೊಡುವಿಯೊ ಬಾರೋ| ತಪ್ಪುಗಳೆಣಿಸದೆ
ಕಾಯಲು ಬಾರೋ| ನಿನ್ಹತ್ತಿಲೆ ಕರೆದು ಮನ್ನಿಸಲು ಬಾರೋ||೨||
ಪಾಂಡವರಿಗೊಲಿದ ಪಾವನನೆ ಬಾರೋ| ಪುಂಡರೀಕವರದ
ನೀ ಬಾರೋ| ಪುರಂದರದಾಸರಿಗನುಗ್ರಹ ಮಾಡಿದ
ಮಧ್ವೇಶಕೃಷ್ಣನೆ ನೀ ಬಾರೋ||೩||
***