2nd Audio by Sri. Madhava Rao
ಬರಿದೆ ಹೋಯಿತು ಹೊತ್ತು ||ಪ||
ನರ ಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ ||ಅ||
ಆಸೆಯೆಬುದು ಎನ್ನ ಕ್ಲೇಶ ಪಡಿಸುತಿದೆ
ಘಾಸಿಯಾದೆನೊ ಹರಿ ಶೇಷಶಾಯಿ
ವಾಸುದೇವನೆ ನಿನ್ನ ಧ್ಯಾನವ ಮಾಡದೆ
ನಾಶವಾಯಿತು ಜನ್ಮ ಮೋಸ ಹೋದೆನು ಕೃಷ್ಣ ||
ಸತಿಸುತರೆಂದೆಂಬ ಅತಿಭ್ರಾಂತಿಗೊಳಗಾಗಿ
ಮತಿಹೀನನಾದೆನೊ ಚ್ಯುತಿದೂರನೆ
ಸತತ ವಿಷಯದಿಂದ ಹತನಾದೆ ಮನವೆನ್ನ
ಗತಿಗೆಡಿಸುತಿದೆ ಲಕ್ಷ್ಮೀಪತಿ ಸರ್ವೋತ್ತಮನೆ ||
ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ
ಮರುಳುತನದಲಿ ಮತಿಹೀನನಾದೆ
ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ
ಮರೆಯದೆ ಸಲಹಯ್ಯ ಪುರಂದರವಿಠಲ ||
***
pallavi
baride hOyitu hottu
anupallavi
nara janma sthiravendu nAniddeno ranga
caraNam 1
Aseyebudu enna klEsha paDisutide gAsiyAdeno hari shESashAyi
vAsudEvane ninna dhyAnava mADade nAshavAyitu janma mOsa hOdenu krSNa
caraNam 2
sati sutarendemba ati bhrAntigoLagAgi mati hInanAdeno cyuti dUrane
satata viSayadinda hatanAde manavenna gatigeDisutide lakSmIpati sarvOttamane
caraNam 3
parara sEveya mADi pararanne koNDADi maruLu tanadali mati hInanAde
nere nambideno ninna karuNadindali enna mareyade salahayya purandara viTTala
***