Audio by Mrs. Nandini Sripad
ಶ್ರೀ ಜಯೇಶವಿಠಲ ದಾಸರ ಕೃತಿ
ರಾಗ ಮಧ್ಯಮಾವತಿ ಆದಿತಾಳ
ಕಲ್ಯಾಣಿ ಪೂರ್ಣೆ ಕರುಣಿಸು । ವರಮಹಾಲಕ್ಷ್ಮೀ ॥ ಪ ॥
ಕಮಲಾಸದನೆ ಸುಸ್ಮಿತವದನೆ ।
ಕಮಲಾನೇತ್ರೆ ಸುಂದರಗಾತ್ರೇ ।
ವಿಮಲಾಪಾಂಗಾದೀಕ್ಷಣದಿಂದಲಿ ।
ಕಮಲಾಸನಭವ ಪದಗಳನೀಡುವೆ ॥ 1 ॥
ಮಂಗಳಮಯಳೆ ತಿಂಗಳಶತನಿಭೆ ।
ಪೊಂಗೊಳಲೂದುವ ರಂಗನ ನಿಜಸತಿ ।
ಶೃಂಗಾರಸಾರಳೆ ಪ್ರಸನ್ನೆ ವರಗಳ ।
ಹಿಂಗದೆ ಪಾಲಿಸು ಹರುಷ ಸುಪೂರ್ಣಳೆ ॥ 2 ॥
ರನ್ನಮಕುಟ ಕಿರೀಟ ಭೂಷಣ ।
ಪೊನ್ನಂಬರ ಪರಿಪೂರ್ಣಳೆ ಪಾಲಿಸು ।
ಘನ್ನ ಕಸ್ತೂರಿ ಕುಂಕುಮ ಫಾಲೆ ।
ಪ್ರಸನ್ನಾಯತ ಸಿರಿನೇತ್ರದಿ ನೋಡೆನ್ನ ॥ 3 ॥
ಅಕ್ಷಯಶೋಭನ ಸುರಿವೋ ಶ್ರೀಕರ ।
ಲಕ್ಷುಮಿ ಎನ್ನಯಭೀಷ್ಟವ ಪಾಲಿಸು ।
ಪಕ್ಷಿಗಮನನ ವಕ್ಷದಿ ಮೆರೆಯುವ ।
ಅಕ್ಷರಪುರುಷಳೆ ವರಮಹಾಲಕ್ಷ್ಮೀ ॥ 4 ॥
ಕಮಲಾ ಮಲ್ಲಿಗೆ ಕೇತಕಿ ಜಾಜಿ ।
ವಿಮಲಾ ಮುಕ್ತಾಮಣಿಮಯ ಹಾರಳೆ ।
ಕಮಲೇ ನೀ ಅತಿ ಕೋಮಲಚಿತ್ತಳೆ ।
ಅಮಲಾ ಜಯೇಶವಿಠಲನ ತೋರಿಸು ॥ 5 ॥
*********