..
kruti by ಮಹಾನಿಧಿವಿಠಲರು mahanidhi vittalaru
ಯಾರೇನು ಮಾಡುವರೋ ಹರಿಯೇ
ಯಾರಿಂದಲೇನಹುದು ಪ
ವಾರಿಜಾಂಬಕ ಮಾರಜನಕ
ಹಾರ ಕೌಸ್ತುಭ ವಕ್ಷ ಶ್ರೀಶಾ ಅ.ಪ.
ಅಜ ಈ ಜಗ ಸೃಜಿಸಿದನೆ
ಶ್ರೀದೇವಿಯು ನಿಜಗುಣ ನೆಲೆಗಂಡಳೆ
ಭುಜಗಭೂಷಣ ಆಯಕರ್ತನಾದರೆ
ಭಜಕನಾ ಬಯಕೆ ಬಾಯಬಿಡುವದೆ 1
ಸುರಪ ಸುರರೊಡೆಯನೆ ಧರಣಿ
ಈ ಉರಗೇಂದ್ರ ಪೊತ್ತಿದನೆ
ದುರುಳನ ಭಯಕೆ ಪುರವ ಬಿಟ್ಟೋಡಿದ
ಧರಣಿಯ ದುರುಳನೊಯ್ಯೆ
ವರಾಹರೂಪದಿ ತಂದೆ ನೀ ತಂದೆ ಹರಿಯೇ 2
ಶ್ರೀಪತಿ ಸುರತತಿಯ ಸೃಜಿಸಿ
ಈಪ್ಸಿತಾರ್ಥಗಳನೆಲ್ಲಾ ಅವರಿಗೆ
ಸ್ವಾಪ್ನಜಾಗೃತಿಯಲಿ ಪರಿಪಾಲಿಸೆ
ಮಹಾನಿಧಿವಿಠಲ ನೀನಲ್ಲದಿನ್ಯಾರೋ 3
***