Showing posts with label ಒಪ್ಪಿತೋ ಹರೀ ನಿಮ್ಮ ಚಲ್ವಿಕೇ hayavadana ಗೋಪಿ ಗೀತಾ OPPITO HARI NIMMA CHALVIKE GOPI GEETAM. Show all posts
Showing posts with label ಒಪ್ಪಿತೋ ಹರೀ ನಿಮ್ಮ ಚಲ್ವಿಕೇ hayavadana ಗೋಪಿ ಗೀತಾ OPPITO HARI NIMMA CHALVIKE GOPI GEETAM. Show all posts

Friday, 10 December 2021

ಒಪ್ಪಿತೋ ಹರೀ ನಿಮ್ಮ ಚಲ್ವಿಕೇ ankita hayavadana ಗೋಪಿ ಗೀತಾ OPPITO HARI NIMMA CHALVIKE GOPI GEETAM

IN DALLAS 2021


ಶ್ರೀ ವಾದಿರಾಜ ತೀರ್ಥರು ರಚಿಸಿದ ಗೋಪಿ ಗೀತಾ.

ಒಪ್ಪಿತೋ ಹರೀ ನಿಮ್ಮ ಚಲ್ವಿಕೇ/
ಹಚ್ಚಿ ಗೋಕುಲ ಕೃಷ್ಣ ಇಂದಿರಾನೆ

ರಮಣನಾಥನೇ ಮಲಯದಾಯಕಾ/
ಶ್ರಮ ಕೊಡುವುದೋ ಅಲ್ಲವೊ ಧರ//೧//.

ಯಮನೆಯಾರುಷಾ ಸರ್ವದಾ ಭಯಾ/
ವೃಷಭನಾಭಯಾ ರಾಕ್ಷಸಾಭಯ

ಏಳು ದಿವಸದಾ ಮಳೆಗಳಾಭಯಾ/
ಗೆದ್ದೆವೋ ಹರಿ ನಿಮ್ಮ ಪರಿಯಲಿ//.

ದರ್ಶನ ಮಾತ್ರದೀ ಪಾಪನಾಶನಾ /
ಪದ್ಯಜಾಕ್ಷಿತೋ ಧರಣಿ ಮಂಡಲ

ಅತ್ತೆ ಮಾವನಾ ಮಾತು ಕೇಳದೇ/
ಚಿತ್ತ ಭ್ರಮೆಯಲಿ ಇತ್ತ ಬಂದವೂ//.

ಬಂದೆವಲ್ಲದೇ ಕೃಷ್ಣವಿರಹದೀ /
ಮಂದಮಾರುತ ಗಾಳಿ ಬೀಸಲು/

ಕೃಷ್ಣ ಬಂದನೇ ಫಲವ ತಂದನೇ/
ಸಖಿಯರೆಲ್ಲರೂ ಸಂತುಷ್ಟಿ ಪಟ್ಟರು//.

ಪೀತಾಂಬ್ರಧಾರಿಯಾ ದಿವ್ಯ ಮಾಲಿಕೇ/
ಕೃಷ್ಣರಾಜರಾ ಕೊರಳಿಗ್ಹಾಕಲು

ಇದು ಭಾಗವತ ವೆನ್ನಿ/
ಇದು ಗೋಪಿಕಾ ಗೀತಾ/

ಇದು ಹೇಳಿ ಕೇಳಿದ ಸಜ್ಜನರಿಗೆ/
ಹಯವದನ ನು ಮುಕ್ತಿಕೊಡುವನು//.
***

pallavi


1: oppitau hari nimma celvike hecci gOkula indirAnane
ramaNi nAthanE malayanAyaka shramakoDuvadu allavO dhara
yamuneyA nija sarvadhAbhaya viSamanAjneya rAkSasAbhaya

caraNam 2

ELudivasada maLegaLA bhaya geddevO hari nimma payadali
darshanamAtradi pApanAshana padmajarjitO dharaNimaNDalam
atte mAvara mAtu kELade citta bhrameyali itta bandevu

caraNam 3

bandevalladE kruSNavirahadi mandamAruta gALi bIsalu
kRruSNabandanE phalava tandanE sakhiyarellarU santOSapaTTaru
pItAmradhAriya divya mAlike kruSNarAyara koraLige hAkalu

caraNam 4

idu bhAgavatavenni idu gopikAgItA idu hELikELida sajjanarige
hayavadananu mukti koDuvanu hayavadananu mukti koDuvanu
hayavadananu mukti koDuvanu?hayavadananu mukti koDuvanu
***



ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.

ವೃಂದಾವನ ದ ಲ್ಲಿ ಗೋಪಿಯರೊಂದಿಗೆ ಕೃಷ್ಣ ರಾಸಕ್ರೀಡೆ, ಜಲಕ್ರೀಡೆ ಗಳನ್ನಾಡಿದುದು ಭಾಗವತಪುರಾಣದಲ್ಲಿ ವರ್ಣಿಸಿದ್ದಾರೆ.

ಆಂಥಹ ಸಮಯದಲ್ಲಿ ಶ್ರೀ ಕೃಷ್ಣ ನನ್ನು ಕಾಣದೇ ವಿರಹದಿಂದ ಬಳಲುವ ಗೋಪಿಯರ ವಿರಹಾಲಾಪ ವನ್ನು ವರ್ಣನೆ ಯೇಗೋಪಿಗೀತಾ ದ ಕಥಾವಸ್ತು.

ಅನೇಕ ಹರಿದಾಸರು ತಮ್ಮ ಕೃತಿಗಳಲ್ಲಿ ಶ್ರೀ ಕೃಷ್ಣನ ಬಾಲ್ಯಲೀಲೆಗಳನ್ನು ಉಪಯೋಗಿಸಿಕೊಂಡಂತೆ
ಗೋಪಿಯರ ವಿರಹಾಲಾಪವನ್ನು ಬಳಸಿಕೊಂಡಿದ್ದಾರೆ.
ಈ ರೀತಿ ಭಾಗವತದ ಗೋಪಿ ಗೀತೆ ವನ್ನು ಶ್ರೀ ವಾದಿರಾಜರು ತಮ್ಮ ಕೃತಿ ಯಲ್ಲಿ ವಿಶೇಷ ವಾಗಿ ವರ್ಣಿಸಿದ್ದಾರೆ.
ಕೃಷ್ಣ ನನ್ನು ಕಾಣದೇ ಗೋಪಿಯರು ಅತಿ ದೈನ್ಯದಿಂದ ಪ್ರಾರ್ಥನೆ ಮಾಡುವುದನ್ನು ಶ್ರೀ ವಿಜಯದಾಸರು ತಮ್ಮ ಕೃತಿಗಳಲ್ಲಿ ಈ ರೀತಿ ವರ್ಣಿಸುತ್ತಾರೆ.

ನಿನ್ನನಗಲಿ ಪೋಗೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸಬಂದೆವೋ//

ಮನ್ನಿಸದೆ ಮಮತೆಯಿಂದ ಭಿನ್ನನುಡಿಗಳಾಡಿ ನಮಗೆ/
ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೋ ಕೃಷ್ಣ//

ಬಂಧು ವರ್ಗವನ್ನು ಬಿಡುವುದು ಸ್ತ್ರೀ ಯರಿಗೆ/
ನಿಂದ್ಯವೆಂದು ಶಾಸ್ತ್ರ ಪೇಳ್ವುದು/
ಎಂದೆಂದಿಗೆಮಗೆ /ನೀನೇ ಬಂಧು ವೆಂದು ಬಂದಿಹವೋ/
ಸಿಂಧು ಶಯನ ಎಮ್ಮನ್ಯಾಕೆ /ಇಂದು ಹೋಗಿರೆಂಬೆ ನೀನು//೨/

ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ/
ತನುವು ಮನವು ನಿನಗೆ ಅರ್ಪಿಸಿ/
ಜನನ ಮರಣದಿಂದ ಜನರು/ದಣಿವರೇನೋ ಕಾಂತನಮ್ಮ/
ಮನಸಿನಂತೆ ಒಲಿದು ಸಲಹೋ/ವನಜನಾಭ ವಿಜಯವಿಠ್ಠಲ//.

ಗೋಪಿ ಗೀತೆ ಯನ್ನು ಕುರಿತು ವ್ಯಾಸರಾಯರು, ಶ್ರೀಪಾದರಾಜರು
ಶ್ರೀ ಪುರಂದರ ದಾಸರು ಅನೇಕ ಹರಿದಾಸರು ತಮ್ಮ ಕೃತಿಗಳಲ್ಲಿ ವರ್ಣಿಸಿದ್ದಾರೆ.

//ಶ್ರೀ ಕೃಷ್ಣಾರ್ಪಣ ಮಸ್ತು//.
***********