ನೋಡಿದೆ ಶ್ರೀಕೃಷ್ಣನ ನೋಡಿದೆ ಪ.
ನೋಡಿದೆ ಒಂಬತ್ತುಗೂಡಿನ ಕಿಟಕಿಯೊಳ್ಕೂಡಿದ ಮಂದಿಯೊಳ್ಗಾಡಿಕಾರನನಿಂದುಅ.ಪ.
ನಾರಿಪುರುಷರೊಂದುಗೂಡಿ ಮುಂದೆದಾರಿಯ ಬಿಡದೆ ಹೋರ್ಯಾಡಿ ದೇಹಯಾರದಂತೆÉ ಪುಡಿಪುಡಿ ಮತ್ತೆಶ್ರೀರಮಣನ ಪಾಡಿ ಬೇಡಿ ಆಹಾ ಸುತ್ತಸೇರಿದ ಜನರಿವರ ಮಧ್ಯದಿಚಾರು ಮೌಕ್ತಿಕದ ಮಣಿಹಾರÀ ಶೃಂಗಾರನ್ನ1
ಅಂಗದೊಳಿಹ ದಿವ್ಯಾಭರಣ ಕನ-ಕಂಗಳೊಪ್ಪಿದ ರವಿಕಿರಣ ಮುನಿ-ಪುಂಗವೆ ವಂದಿಪ ಚರಣಕಮ-ಲಂಗಳ ನೆನೆವರ ಕರುಣ ಆಹಾ ಹಿಂಗದೆÉ ಪೊರೆವ ಶ್ರೀರಂಗನುತ್ಸವÀಕೆಂದುಮಂಗಲಾರತಿಯಾಗಿ ಸಂಗಡ ಪೊರಡಲು 2
ಭರದಿಂದ ಪಲ್ಲಕ್ಕಿನೇರಿ ಮಧ್ವಸರೋವರದೆಡೆಯನು ಸಾರಿ ಸುತ್ತಮೆರೆವ ದೀಪದಿಂದೀರಿ (?) ನೋಳ್ಪ ಜ-ನರಿಗೆ ಜಲಕ್ರೀಡೆ ತೋರಿ ಆಹಾಸಿರಿ ಅರಸನು ಹಯವದನನೇರಿ ಮೆರೆವ ಉಡುಪಿಯೊಳ್ಪರಿಯಾಯ ವಿನೋದವನ್ನು 3
***
ನೋಡಿದೆ | ಶ್ರೀಕೃಷ್ಣನ | ನೋಡಿದೆ || PA ||
ನೋಡಿದೆ ಒಂಬತ್ತುಗೂಡಿನ ಕಿಟಕಿಯೊಳ್ಕೂಡಿದ
ಮಂದಿಯೊಳ್ಗಾಡಿಕಾರನನಿಂದು || A. PA ||
ನಾರಿ ಪುರುಷರೊಂದುಗೂಡಿ ಮುಂದೆ
ದಾರಿಯ ಬಿಡದೆ ಹೋರ್ಯಾಡಿ ದೇಹ
ಯಾರದಂತೆ ಪುಡಿ ಪುಡಿ ಮತ್ತೆ
ಶ್ರೀರಮಣನ ಪಾಡಿ ಬೇಡಿ | ಆಹಾ |
ಸುತ್ತ ಸೇರಿದ ಜನರಿವರ ಮಧ್ಯದಿ ಚಾರು
ಮೌಕ್ತಿಕದ ಮಣಿಹಾರ ಶೃಂಗಾರನ್ನ || 1 ||
ಅಂಗದೊಳಿಹ ದಿವ್ಯಾಭರಣ ಕನ-
ಕಂಗಳೊಪ್ಪಿದ ರವಿಕಿರಣ ಮುನಿ-
ಪುಂಗವೆ ವಂದಿಪ ಚರಣಕಮ-
ಲಂಗಳ ನೆನೆವರ ಕರುಣ | ಆಹಾ |
ಹಿಂಗದೆ ಪೊರೆವ ಶ್ರೀರಂಗನುತ್ಸವಕೆಂದು
ಮಂಗಲಾರತಿಯಾಗಿ ಸಂಗಡ ಪೊರಡಲು || 2 ||
ಭರದಿಂದ ಪಲ್ಲಕ್ಕಿನೇರಿ ಮಧ್ವ-
ಸರೋವರದೆಡೆಯನು ಸಾರಿ ಸುತ್ತ
ಮೆರೆವ ದೀಪದಿಂದಲಿ ನೋಳ್ಪ ಜ-
ನರಿಗೆ ಜಲಕ್ರೀಡೆ ತೋರಿ | ಆಹಾ |
ಸಿರಿ ಅರಸನು ಹಯವದನ ಉಡುಪಿಯೊಳ್
ಏರಿ ಮೆರೆವ ಪರ್ಯಾಯ ವಿನೋದವ || 3 ||
***
nōḍide | śrīkr̥ṣṇana | nōḍide || PA ||
nōḍide ombattugūḍina kiṭakiyoḷkūḍida mandiyoḷgāḍikārananindu || A. PA ||
nāri puruṣarondugūḍi munde dāriya biḍade hōryāḍi dēha yāradante puḍi puḍi matte śrīramaṇana pāḍi bēḍi | āhā |
sutta sērida janarivara madhyadi cāru mauktikada maṇihāra śr̥ṅgāranna || 1 ||
aṅgadoḷiha divyābharaṇa kana- kaṅgaḷoppida ravikiraṇa muni- puṅgave vandipa caraṇakama- laṅgaḷa nenevara karuṇa | āhā |
hiṅgade poreva śrīraṅganutsavakendu maṅgalāratiyāgi saṅgaḍa poraḍalu || 2 ||
bharadinda pallakkinēri madhva- sarōvaradeḍeyanu sāri sutta mereva dīpadindali nōḷpa ja- narige jalakrīḍe tōri | āhā |
siri arasanu hayavadana uḍupiyoḷ ēri mereva paryāya vinōdava || 3 ||
Plain English
nodide | srikrsnana | nodide || PA ||
nodide ombattugudina kitakiyolkudida mandiyolgadikarananindu || A. PA ||
nari purusarondugudi munde dariya bidade horyadi deha yaradante pudi pudi matte sriramanana padi bedi | aha |
sutta serida janarivara madhyadi caru mauktikada manihara srngaranna || 1 ||
angadoliha divyabharana kana- kangaloppida ravikirana muni- pungave vandipa caranakama- langala nenevara karuna | aha |
hingade poreva sriranganutsavakendu mangalaratiyagi sangada poradalu || 2 ||
bharadinda pallakkineri madhva- sarovaradedeyanu sari sutta mereva dipadindali nolpa ja- narige jalakride tori | aha |
siri arasanu hayavadana udupiyol eri mereva paryaya vinodava || 3 ||
***