..
ಎಂಥ ಗರವು ನೋಡಮ್ಮಯ್ಯರುಕ್ಮಿಣಿಗೆಂಥ ಗರವು ನೋಡಮ್ಮಯ್ಯಕಂತುನಯ್ಯನ ಎನಗಂತ್ರವ ಮಾಡಿದ ಮಂತ್ರವ ಮಾಡಿದಳಮ್ಮಯ್ಯ ಪ.
ಹಿಡಿದ ವೀಳ್ಯವ ನಾನು ಕೊಡುವೊ ಸಮಯದಿಬಂದು ಕಿಡಿ ಹಾಕಿದಳು ನೋಡಮ್ಮಯ್ಯಭಾವೆ ಕಿಡಿಯ ಹಾಕಿದಳು ನೋಡಮ್ಮಯ್ಯ ಹುಡುಗೆ ವೀಳ್ಯಕೆ ಮುಖಕೊಡಬಹುದುಕೃಷ್ಣನು ಬಿಡನು ಇವಳದೇನಮ್ಮಯ್ಯಇಂಥ ಭಿಡೆಯು ಇವಳದೇನಮ್ಮಯ್ಯ 1
ಶ್ರೀಧರನ ಪಾದದಲೆ ಮೋದ ಇಟ್ಟವಳಿಗೆಆದರವಿಲ್ಲ ನೋಡಮ್ಮಯ್ಯಏನೂ ಆದರವಿಲ್ಲ ನೋಡಮ್ಮಯ್ಯ ಕಾಡುತ ಕೊಟ್ಟ ವೀಳ್ಯವ ಮಾಧವಗೆಕೊಟ್ಟರೆ ಹೋದೀತು ಬುದ್ದಿ ನೋಡಮ್ಮಯ್ಯರುಕ್ಮಿಣಿಯಲ್ಲೆ ಹೋದೀತು ಬುದ್ಧಿ ನೋಡಮ್ಮಯ್ಯ 2
ಥಾಟು ಥೀಟಿನ ಭಾವೆ ಮಾಟ ಮಾಡಿದಳೇನಮ್ಮಯ್ಯಬೂಟಕತನ ನೋಡಮ್ಮಯ್ಯಬೂಟಕಗುಣದವಳ ಕೂಟಕೆ ಮೆಚ್ಚಿದಹರಿಯ ಆಟವÀ ನೋಡಮ್ಮಯ್ಯಮರುಳಾಟವ ಹರಿಯ ನೋಡಮ್ಮಯ್ಯ3
ಸೃಷ್ಟ್ಯಾದಿಕರ್ತಗೆ ಇಟ್ಟಳು ಮದ್ದಾನೆ ಧಿಟ್ಟತನವ ನೋಡಮ್ಮಯ್ಯರುಕ್ಮಿಣಿಯ ದಿಟ್ಟತನವ ನೋಡಮ್ಮಯ್ಯಎಷ್ಟು ಧೈರ್ಯವೆಂದು ಕೃಷ್ಣತಾ ಬೆರಗಾಗಿ ಬಿಟ್ಟನುವೀಳ್ಯವ ನೋಡಮ್ಮಯ್ಯ4
ವಟಪತ್ರ ಶಾಯಿಗೆ ಕುಟಿಲ ಮಂತ್ರವಮಾಡೊ ಚಟುಲತನ ನೋಡಮ್ಮಯ್ಯ ಭಾವೆಯ ಚಟುಲತನವ ನೋಡಮ್ಮಯ್ಯಸಟಿಯಲ್ಲ ಇವಳೆದೆ ಕಠಿಣತಿಶÀಯವೆಂದು ಮಿಟಿಮಿಟಿ ನೋಡಿದನಮ್ಮಯ್ಯಕೃಷ್ಣ ಮಿಟಿಮಿಟ ನೋಡಿದನಮ್ಮಯ್ಯ 5
ಭಾಳೆ ದಯಾಳು ಎಂದು ಹೇಳುವ ಶೃತಿಗಳುಕೇಳಿ ಆಟವು ನೋಡಮ್ಮಯ್ಯಹರಿಯ ಕೇಳಿ ಆಟವು ನೋಡಮ್ಮಯ್ಯಕಾಳ ಕೂಟವ ಕೈತಾಳವ ಹಿಡಿದಂತೆಆಳುವನಿವಳ ನೋಡಮ್ಮಯ್ಯಕೃಷ್ಣ ಆಳುವನಿವಳ ನೋಡಮ್ಮಯ್ಯ6
ಸರ್ವದಾ ತನ್ನ ಕೂಡ ಇರಬೇಕೆಂದೆನುತಲಿಎರೆದಳು ತೈಲವ ನೋಡಮ್ಮಯ್ಯಹರಿಗೆ ಎರೆದಳು ತೈಲವಮ್ಮಯ್ಯಭರದಿ ಕೋಪಿಸಿ ಕಣ್ಣು ತೆರೆದು ನೋಡುವರೆನ್ನಧರಿಸಲಿನ್ನೆಷ್ಟು ನೋಡಮ್ಮಯ್ಯನಾ ಧರಿಸಲಿನ್ನೆಷ್ಟು ನೋಡಮ್ಮಯ್ಯ 7
ಪುಂಡರೀಕಾಕ್ಷನ ಕೊಂಡಾಡಿ ಸುಖಿಸುವಹೆಂಡಿರು ಕಡಿಮೆಯೇನಮ್ಮಯ್ಯಹರಿಗೆ ಹೆಂಡಿರು ಕಡಿಮೆಯೇನಮ್ಮಯ್ಯಕೆಂಡವ ತುಂಬಿದ ಮಂಡಿ ತೋರಿಸಿದಂತೆಚಂಡಿಯನಾಳುವ ನಮ್ಮಯ್ಯಕೃಷ್ಣ ಚಂಡಿಯನಾಳುವ ನಮ್ಮಯ್ಯ8
ಧಿಟ್ಟಿಯರಿಬ್ಬರು ಕೋಪ ಬಿಟ್ಟರೆ ಇವರಿಗೆಎಷ್ಟು ಒಲುಮೆ ನೋಡಮ್ಮಯ್ಯನಾ ಎಷ್ಟು ಒಲುಮೆ ನೋಡಮ್ಮಯ್ಯಧಿಟ್ಟ ರಾಮೇಶನಲೆ ಇಟ್ಟರೆ ಇವರಿಗೆಎಷ್ಟರೆ ಗರ್ವ ನೋಡಮ್ಮಯ್ಯಬೇಡಿದ್ದು ಎಷ್ಟರೆ ಗರ್ವ ನೋಡಮ್ಮಯ್ಯ 9
****