ವಂದಿಸುವೆ ಗಣರಾಜ ನೀ ದಯದಿಂದ ಪಾಲಿಸುವುದು ಪ
ಸದ್ಗುಣಭರಿತನೇ ದುರ್ಗುಣರಹಿತನೇ ವಿಘ್ನವಿನಾಶಕನೇ
ಭಗ್ನಗೈಸೋ ಎನ್ನ ಅವಗುಣಗಳ ನೀ ವಿದ್ಯಾದಾಯಕನೇ 1
ಶ್ರೀಶನಂಘ್ರಿಸರೋಜಭೃಂಗ ಮಹೇಶನ ವರಸುತನೇ
ವ್ಯಾಸಕರುಣಾಪಾತ್ರನೇ ಮನದಾಸೆ ಪೂರೈಸುವವನೇ 2
ಪಾಶಪಾಣಿಯೆ ಪ್ರಾರ್ಥಿಸುವೆ ನೀ ಲೇಸು ಕೊಡುವುದಿನ್ನಾ
ಶ್ರೀಶ ಶ್ರೀ ಹನುಮೇಶವಿಠಲನ ದಾಸನೇ ಅನುದಿನಾ 3
****