ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದನೇಳೆ ದೇವಿ ರಂಗ ಮನೆಗೇ| ಇಂದು ಮುಖಿ ನಿನ್ನ ಮನದಾ ನಂದ ಕೊಡಲು ಪ
ಭಾಗವತ ರೊಡಗೂಡಿ| ಭಕ್ತಿರಂಗದೊಳಾಡಿ ಸುಖವ ಸೂರ್ಯಾಡಿ 1
ಗರುಡವಾಹನ ಪರಾಕೆಂಬ ಶೃತಿ ಭಟರು| ಮೂರಾರು ಸಾಲ ಪಂಜಿನ ಬೆಳಗಿನಿಂದ 2
ಸಕಲ ಸುಂದರ ರಾಶಿಯೆ ಎನಿಪ ಮೋಹನರೂಪ| ಅಕಳಂತಕ ಬ್ರಹ್ಮಾದಿ ಸುರರೊಡೆಯಾ 3
ದುರಿತ ಹರನೆಂಬ| ಬಿರದ ಜಾಂಗಟೆ ಶಂಖ ಕೌಸಾಳರವದಿ 4
ತನ್ನ ಭೃತ್ಯರ, ಭೃತ ಭೃತ್ಯನ ಕರೆದು| ಮನ್ನಿಸುವ ಮಹಿಪತಿ ಸುತಪ್ರಾಣ ಪದಕಾ 5
***