..
ದಾಸಗುರೂ | ದಾಸಗುರೂ |
ವಾಸವ ನಾಮಕ ಪ
ಭೂಸುರರಿಗೆ ಧನರಾಶಿ ಸಮರ್ಪಿಸಿ
ವ್ಯಾಸರಾಯರುಪದೇಶಗೊಂಡ ಹರಿ ಅ.ಪ
ಜಲಜಭವನ ಪಿತನಾಜ್ಞೆಯಲಿ
ಕಲಯುಗದಲಿ ಜನ್ಮ ತಾಳುತಲಿ
ಅಲವ ಬೋಧಾಮೃತ ನೆಲೆಯನು ಸುಲಭದಿ
ತಿಳಿಗನ್ನಡದಲ್ಲಿ ತಿಳಿಸಿ ಸಲುಹಿದ 1
ಪವನದೇವನ ಒಲಿಸುತಲಿ | ಮಾ
ಧವನ ಸ್ತುತಿಸಿ ಸಲೆ ಕುಣಿಯುತಲಿ
ಕವನದಿ ಭಕುತಿಯ ನವವಿಧ ಮಾರ್ಗವ
ಅವನಿಗೆ ಬೀರಿದ ದಿವಜ ಮೌನಿವರ 2
ಕಾಮಿತ ಫಲಗಳ ಗರಿಯುತಲಿ ಬಲು
ಪಾಮರ ಜನರನು ಸಲಹುತಲಿ
ಶ್ರೀಮನೋವಲ್ಲಭ ಶಾಮುಂದರ
ನಾಮಾಮೃತವನು ಪ್ರೇಮದಿಂದುಣಿದ 3
***