Showing posts with label ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ mahipati. Show all posts
Showing posts with label ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ mahipati. Show all posts

Wednesday 1 September 2021

ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ ಭಾವಿಕರಿಗೆ ಜೀವಕೆ ಜೀವ ಪ 


ಸಾಮಜಪ್ರಿಯ ಸುರಲೋಕಪಾಲ ಕಾಮಪೂರಿತ ನೀ ಸಿರಿಸಖಲೋಲ ಸಾಮಗಾಯನಪ್ರಿಯ ಸದೋದಿತ ಸ್ವಾಮಿನಹುದೊ ನೀನೆವೆ ಗೋಪಾಲ 1 

ಅಕ್ಷಯ ಪದ ಅವಿನಾಶ ಪೂರ್ಣ ಪಕ್ಷಿವಾಹನ ಉರಗಶಯನ ಪಕ್ಷಪಾಂಡವಹುದೊ ಪರಿಪೂರ್ಣ ಲಕ್ಷುಮಿಗೆ ನೀ ಜೀವನಪ್ರಾಣ 2 

ದಾತನಹುದೊ ದೀನದಯಾಳ ಶಕ್ತಸಮರ್ಥ ನೀನೆ ಕೃಪಾಲ ಭಕ್ತವತ್ಸಲನಹುದೊ ಮಹಿಪತಿ ಸ್ವಾಮಿ ಪತಿತಪಾವನ ನೀನವೆ ಅಚಲ 3

***