Showing posts with label ಇದೇ ದೇವ ಪೂಜಿಯು ನೋಡಿ ಹೃದಯದಲಿ ನಿಜ mahipati. Show all posts
Showing posts with label ಇದೇ ದೇವ ಪೂಜಿಯು ನೋಡಿ ಹೃದಯದಲಿ ನಿಜ mahipati. Show all posts

Wednesday, 1 September 2021

ಇದೇ ದೇವ ಪೂಜಿಯು ನೋಡಿ ಹೃದಯದಲಿ ನಿಜ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ದೇವ ಪೂಜಿಯು ನೋಡಿ ಹೃದಯದಲಿ ನಿಜ ಒಡಗೂಡಿ ಧ್ರುವ ಮೂರ್ತಿಎಂಬುದೆ ಅಮೂರ್ತಿ ನಾಮರೂಪ ನಿಜ ಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ 1 
ನಿತ್ಯನಿರ್ಗುಣ ನಿರ್ವಿಕಲ್ಪ ಸತ್ಯಸದ್ಗುರು ಸ್ವರೂಪ ನಿತ್ಯ ನಿತ್ಯದಿತ್ಯರ್ಥ ಸುದೀಪ ತತ್ವಙÁ್ಞನ ಮನಮಂಟಪ 2 
ಸ್ವಾನುಭವ ಸ್ವಾದೋದಕ ಙÁ್ಞನ ಭಾಗೀರಥಿ ಅಭಿಷೇಕ ಮೌನ ಮೌನ್ಯ ವಸ್ತ್ರಾಮೋಲಿಕ ಧಾನ್ಯವೆಂಬುದೆ ಸೇವಿ ಅನೇಕ 3 
ಗಂಧಾಕ್ಷತಿ ಪರಿಮಳ ಫಲಪುಷ್ಪ ಬುದ್ಧಿ ಮನವಾಯಿತು ಸ್ವರೂಪ ಸದ್ವಾಸನ್ಯಾಯಿತು ಧೂಪ ದೀಪ ಸದ್ಭಾವನೆ ನೈವೇದ್ಯ ಮೋಪ 4 
ಫಲತಾಂಬೂಲವೆ ಸದ್ಭಕ್ತಿ ಮೂಲಜೀವ ಭಾವನೆ ಮಂಗಳಾರ್ತಿ ಬಾಲಕ ಮಹಿಪತಿ ನಿಜಪೂಜಿಸ್ಥಿತಿ ಕುಲಕೋಟಿ ಉದ್ಧರಿಸುವ ಗತಿ 5
****