Showing posts with label ನೀರೇ ತೋರೇ ಪಯೋನಿಧಿ ವಾಸನಾ ನೀರ ಜಾಸನಾನಂತ ಸರ್ವೇಶನಾ gurumahipati. Show all posts
Showing posts with label ನೀರೇ ತೋರೇ ಪಯೋನಿಧಿ ವಾಸನಾ ನೀರ ಜಾಸನಾನಂತ ಸರ್ವೇಶನಾ gurumahipati. Show all posts

Wednesday 1 September 2021

ನೀರೇ ತೋರೇ ಪಯೋನಿಧಿ ವಾಸನಾ ನೀರ ಜಾಸನಾನಂತ ಸರ್ವೇಶನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೀರೇ ತೋರೇ ಪಯೋನಿಧಿ ವಾಸನಾ| ನೀರ ಜಾಸನಾನಂತ ಸರ್ವೇಶನಾ ಪ 


ಹಸ್ತ ವರದನ ಹರಿಮಧುಸೂದನ| ಹಸ್ತಿ ವಾಹಜನ ಸೂತಾದನಾ 1 

ಕರಿಯೇರಿದಾತನ ಶರಕುರುವಾತನ| ಕರಿಹರ ಸಖ ಸನಾತನಾ 2 

ಅನಂತ ಮಹಿಮ ಕೇಶವ ಮುಕುಂದನ| ಅನಂತ ಶಯನ ಗೋವಿಂದನಾ 3 

ಮಕರ ಧ್ವಜ ಪಿತನ ಪರಮಾನಂದನ| ಮಕರ ಧ್ವಜ ಪಿತ ವಂದ್ಯನಾ4 

ತಂದೆ ಮಹಿಪತಿ ನಂದನ ಜೀವನ| ಹೊಂದಿದವರ ಕಾವಾ ದೇವನಾ5

****