..
ನೀರೆ ದ್ವಾರಕೆಯ ಸೊಬಗು ಬ್ರಹ್ಮರಾಯ ಬಟ್ಟಾನು ಬೆರಗು ನೀರೆ ಪ.
ಚದುರೆ ಬಾಜಾರದಿ ಕುದುರೆ ಸಾಲುಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟು ಅಂಬಾರಿಸದರಿನ ಆನೆ ಸೊಬಗೆಷ್ಟು1
ಹಿಂಡು ಗೆಳತಿಯರೆಲ್ಲ ತಂಡ ತಂಡ ನೆರೆದುದುಂಡು ಮಲ್ಲಿಗೆಯ ತುರುಬಿನದುಂಡು ಮಲ್ಲಿಗೆ ತುರುಬಿನ ಕುವರಿಯರು ಚಂಡನಾಡುವÀರು ಕಡೆಯಿಲ್ಲ 2
ನೀಲಮಾಣಿಕ ಬಿಗಿದ ಮೇಲಾದ ಮನೆಗಳುಮ್ಯಾಲೆ ಕನ್ನಡಿಯ ನಿಲ್ಲಿಸ್ಯಾವಮ್ಯಾಲೆ ಕನ್ನಡಿಯ ನಿಲ್ಲಿಸಿದ ಮನೆಯೊಳುಸಾಲು ದೀವಟಿಗೆ ಸೊಬಗೆಷ್ಟು 3
ಬಟ್ಟ ಮುತ್ತಿನ ತೋರಣ ಕಟ್ಟಿದ ಮನೆಯೊಳುಅಟ್ಟಳ ಮ್ಯಾಲೆ ಧ್ವಜಗಳುಅಟ್ಟಳ ಮ್ಯಾಲೆ ಧ್ವಜಗಳು ಗಗನಕ್ಕೆಮುಟ್ಟಿವೆಂಬಂತೆ ನಿಲ್ಲಿಸ್ಯಾವೆ4
ದೊರೆಗಳ ಮನೆಯಿಂದ ಬರೆದ ಚಿತ್ರದÀ ಬೊಂಬೆಗಳುಕರೆದಾವ ಕೈ ಬೀಸುತೆಕೈ ಬೀಸಿ ನಮ್ಮ ಎದುರಿಗೆಬರತಾವೆಂಬಂತೆ ನಿಲ್ಲಿಸ್ಯಾವ 5
ಏಳಂತಸ್ತಿನ ಮಾಳಿಗೆ ಮ್ಯಾಲಿನ ಗೊಂಬೆಗಳು ಬಾಳೆ ಎಲೆಯಂತೆ ಬಳಕುತ ಬಾಳೆ ಎಲೆಯಂತೆ ಬಳಕುತಕಿವಿಮಾತು ಹೇಳ್ಯಾವೆಂಬಂತೆ ನಿಲ್ಲಿಸ್ಯಾವೆ6
ಚದುರ ರಾಮೇಶನು ಕುದುರೆ ಏರಿಕೊಂಡುಮದನ ಜನಕನು ಸುಳಿಯೋನೆ ಮದನ ಜನಕನು ಸುಳಿಯೋನೆಒಮ್ಮೊಮ್ಮೆ ಮುದದಿ ಭಕ್ತರನ ಸಲುಹಲಿ 7
****