Showing posts with label ಶ್ರೀರಮಾರಮಣಂ ಸರಸಿಜನಯನಂ govinda. Show all posts
Showing posts with label ಶ್ರೀರಮಾರಮಣಂ ಸರಸಿಜನಯನಂ govinda. Show all posts

Sunday, 17 November 2019

ಶ್ರೀರಮಾರಮಣಂ ಸರಸಿಜನಯನಂ ankita govinda

by ಗೋವಿಂದದಾಸ
ಶ್ರೀ ರಮಾರಮಣಂ |ಸರಸಿಜನಯನಂ ||ಕ್ಷೀರವಾರಿಧಿ ಶಯನಂ ಪ

ಮಾರಜನಕಮುರವೈರಿ ಜನಾರ್ದನ |ತೋರಿಸಲಹು ದಶಾವತಾರ ಹರೀ ||ಶ್ರೀರಾಮ||ಅ.ಪ

ಪೊಳವ ನಾರುವ ಮೈಯ್ಯಾ | ತಳೆದು ತೋರುವ ಕೈಯಾ ||ಬಲಿದ ಕೋರೆಯ ಬಾಯಿ | ಗಳದ ಕರುಳ ಮಾಲೆಯ |ಚೆಲುವ ಬ್ರಹ್ಮಚಾರಿ || ಪಡೆದಳ ಕಡಿದು ಪಿತಗೆ ತೋರಿ ||ಇಳೆಯಧಿಪತಿ | ಗೋವಳರರಸನು |ಘೋರತಮಾ ಸುರಾರಿ | ಭಾರಮಂದರೋದ್ಧಾರಿ |ಧಾರಿಣೀ ಚೋರವೈರಿ | ಸಾರೀ ಮನವ ಕೇಸರೀ ||ಮೂರಡಿಧರೆಬೇಡಿ ಧರಣಿಪ | ವೀರರೊಳ್ ಹಗೆಮಾಡಿ |ವಾರಿಧಿಬಂಧಿಸಿ | ತೀರಿಸಿ ಕಂಸನ | ನಾರಿಯರೊಡಗೂಡಿ |ಏರಿದೆ ತುರಗವಾ 2

ವೇದೋದ್ಧಾರವ ಗೈದೆ | ಭೇದದಿ ಸುಧೆಯೆರೆದೆ ||ಮೇದಿನಿಯನು ತಂದೆ | ಪ್ರಹಲ್ಲಾದಗೊಲಿದೇ ||ಕಾದೆ ಬಲಿಯೊಳ್ ದ್ವಾರ | ವಿಬುಧರ ಆದರಿಸಿದೆ ವೀರ |ಮೇದಿನಿಸುತೆ ಚೋರಾಂತಕ ಯದುಪತಿ | ಸಾಧು ವಂದಿತ |ಮ್ಲೇಂಛಾರಿ ಗೋವಿಂದನೇ 3
*******