by ಪ್ರಸನ್ನವೆಂಕಟದಾಸರು
ಶ್ರೀ ವಾದಿರಾಜ ಸಲಹೆನ್ನ ರಾಜಸೇವಕರಿಗಮರಭೂಜರಾಜ ಪ.
ಪಾವನ ಸುಕೀರ್ತಿ ಚಂದ್ರಿಕೆಯಿಂದ ಥಳಥಳಿಸಿಭೂವಲಯಕಾಹ್ಲಾದವನಿತ್ತೆ ರಾಜ ಅ.ಪ.
ಚತುರ ಹಯಗ್ರೀವ ವಹಿಸಿ ಹೊಳೆವ ದಶಮತಿಶಾಸ್ತ್ರ್ತರಥವ ನಿರ್ಮಿಸಿಶ್ರುತಿಪಂಚರಾತ್ರವನ್ನು ವಾಜಿಗೈದುಋತು ಭೇದಶರ ಒಗ್ಗೂಡಿಸಿನ್ನೆಸೆದುಕ್ಷಿತಿಯರ ದುರ್ವಾದಿಗಳ ಜೈಸಿದೆ ಅಪ್ರತಿಮಹಾರಥಿಕನೆನಿಸುವ ಚಕ್ರವರ್ತಿ ರಾಜ1
ಬೇಕಾದ ಪುರುಷಾರ್ಥವ ಕೊಡುವಗುಣಶಾಖೆಗಳ ಸೊಬಗುದೋರೆಶ್ರೀಕರ ಗ್ರಂಥರಚನೆಗಳ ವನೇಕ ಪತ್ರದವುಗಳಿರೆಆ ಕರುಣ ಲೋಚನ ಕುಸುಮರಸವನುಂಡುಝೇಂಕರಿಪಕವಿಮಧು ಮಕರಂದ ರಾಜಿಸುವ ರಾಜ2
ಸಾರಾರ್ಥ ಚೋರ ಕುಲದಗಲ ಭೇದಿಸಿ ಸಂಚಾರ ಧರೆಯೊಳಗಿಡಿಸಿಈರಮತಸದ್ವನದಿಹಪಂಡಿತಚಕೋರಗಳ ನಲಿನಲಿಸಿದೆಧೀರ ವಾಗೀಶಕರವಾರಿಧಿಭವ ವಾದಿವಂದ್ಯವಾರಿನಿಧಿ ನಂದಕರ ಪ್ರಸನ್ವೆಂಕಟಪ್ರಿಯ 3
*******