Showing posts with label ಪಂಚಗಂಗಿಯ ಯಾತ್ರಿ vijaya vittala ankita suladi ಕಾಶಿ ಮಹಾತ್ಮೆ ಸುಳಾದಿ PANCHAGANGIYA YAATRI KASHI MAHATME SULADI. Show all posts
Showing posts with label ಪಂಚಗಂಗಿಯ ಯಾತ್ರಿ vijaya vittala ankita suladi ಕಾಶಿ ಮಹಾತ್ಮೆ ಸುಳಾದಿ PANCHAGANGIYA YAATRI KASHI MAHATME SULADI. Show all posts

Monday 9 December 2019

ಪಂಚಗಂಗಿಯ ಯಾತ್ರಿ vijaya vittala ankita suladi ಕಾಶಿ ಮಹಾತ್ಮೆ ಸುಳಾದಿ PANCHAGANGIYA YAATRI KASHI MAHATME SULADI


Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ಕಾಶಿ ಮಹಾತ್ಮೆ ಸುಳಾದಿ 

 ಧ್ರುವತಾಳ 

ಪಂಚಗಂಗಿಯ ಯಾತ್ರಿ ಮಾಡುವುದು ಚನ್ನಾಗಿ 
ಕೊಂಚವಲ್ಲವು ಕಾಣೊ ತ್ರಿಜಗದೊಳೂ 
ಸಂಚಿತಾ ಪ್ರಾರಬ್ಧಾಗಾಮಿ ನಾಶವಾಗುವುದು ವಿ-
ರಂಚಿ ಜನಕ ರಂಗ ಒಲಿವ ಬಂದು 
ಮುಂಚು ಮುಂಚಾಗಿ  ಜ್ಞಾನಪೆಚ್ಚುವದೂ ಪ್ರಾ
ಪಂಚದೊಳಗಿದ್ದರು ನಿರ್ಲಿಪ್ತನೋ 
ಕಿಂಚಿತು ಕಾಲಾ ಇಲ್ಲಿ ವಾಸಾವಾಗಿರಲು ಸಂ-
ಕಿಂಚಿನನಾಗುವ  ಜ್ಞಾನಧನದೀ
ಚಂಚಲತನ ಬಿಟ್ಟು ಏಕಭಕುತಿಯಿಂದ 
ಸಂಚಗಾರವನೀಯೊ ಹರಿ ಭಟರಿಗೆ 
ಪಂಚ ಭಗವದ್ರೂಪ ಮನದೊಳು ನಿಲಿಸಿರಿ 
ಪಂಚ ಬುದ್ಧಿಯಿಂದ ಉತ್ತಮರೊಳಗೆ 
ಸಂಚಾರವನೆ ಇದೆ ಸಾಧನವೇ ಎಂದು 
ಮಿಂಚುವ ಕಾಯದಲ್ಲಿ ನಲಿದಾಡುತಾ 
ಪಂಚಗಂಗಿಯ ಸ್ನಾನ ಸುಲಭವಲ್ಲವೊ ಮರುಳೆ 
ಪಂಚಮೊಗನ ಕರುಣಾ ಪಡಿಯಬೇಕು 
ಅಂಚಿ ಅಂಚಿಗೆ ಈತ ಒಲಿಯಾದಲ್ಲದೆ ಅಹಿ
ಮಂಚಾ ಉಳ್ಳ ದೇವೇಶನೀಕ್ಷಿಸುವನು 
ಪಂಚಪ್ರಾಣಾನೊಳಗೆ ಇಪ್ಪಾ ವಿಜಯವಿಠಲನ 
ಮುಂಚಾಗಿ ನೆನಸಲು ಸರ್ವಸಾಧ್ಯಾ ॥೧॥

 ಮಟ್ಟತಾಳ 

ಭೂತಳದೊಳು ಗಂಗಾ, ಯುಮುನ, ಸರಸ್ವತಿ ಉಂಟು, ಕಾಶಿ 
ಕ್ಷೇತ್ರದ ಮಧ್ಯಾ ಮಾತು ಮಾತಿಗೆ ಇದನೆ ಕೊಂಡಾಡಿದ ನರನ 
ಪಾತಕ ಪರಿಹಾರಾ ಪರಮ ಜ್ಞಾನವೆ ಪ್ರಾಪ್ತಿ 
ಭೂತಪ್ರೇತಾದಿಗಳ ದೇಹ ಬಂದಿದ್ದಾರಾಗೆ 
ವಾತ ಮುಖದಿಂದಾ ಕಣ ಸೋಕಿದರಾಗಲೆ 
ಜೋತಿರ್ಮಯಾ ಕಾಯಾ ಬರುವದು ಸಿದ್ಧವಯ್ಯಾ 
ಸೀತಾನದಿ ಜನಕಾ ವಿಜಯವಿಠಲರೇಯಾ 
ಕೌತುಕಮಾಡಿಪ್ಪ ಪುಣ್ಯಪಾಪಗಳಿಲ್ಲಾ  ॥೨॥

 ತ್ರಿವಿಡಿತಾಳ 

ಉರ್ಜಾಮಾಸಾದಲ್ಲಿ ಪಂಚಗಂಗಿಯಸ್ನಾನಾ 
ಸಜ್ಜನರೊಡಗೂಡಿ ಮಾಡಲವಗೆ 
ಮುರ್ಜಗದೊಳು ಬಿಡದೆ ಸರ್ವಪುಣ್ಯಗಳು ತಾ 
ಹೆಜ್ಜಿ ಹೆಜ್ಜಿಗೆ ನೆಸಗೆ ಬಲುಕಾಲಾವು 
ತಜ್ಜಾತಿಗಿಂದಧಿಕಾ ದಶಮಡಿ ಪುಣ್ಯಗಳು 
ಆರ್ಜವಗುಣದಿಂದ ಬರುವವಾದಕೂ 
ನಿರ್ಜರಾವಳಿ ಇವನ ಕೊಂಡಾಡುವನು ಪಾಪ 
ವರ್ಜಿತನಾಗಿ ಬಾಳುತಲಿಪ್ಪನೊ 
ಪ್ರಜ್ವಲಿಸುವ ನಾನಾ ದೇಶದಲಿ ಕೀರ್ತಿ 
ಪರ್ಜನ್ಯ ವ್ಯಾಪಿಸಿಕೊಂಡಿಹದೊ 
ವಜ್ರಪಾಣಿಯಾ ಲೋಕಾಸೇರುವಾರು ಮೀರಿ 
ಘರ್ಜನೆಮಾಡುವ ಮೇಲು ಮೇಲೂ 
ದುರ್ಜನ ಹರ ನಮ್ಮ ವಿಜಯವಿಠಲರೇಯಾ 
ಮಜ್ಜನಮಾಡಿಸುವಾ ವಿರಜಾನದಿಯಲಿ  ॥೩॥

 ಅಟ್ಟತಾಳ 

ಭೂಸುರಜಾಮಿಳ ಜಾತಿ ಭ್ರಷ್ಟನಾಗಿ 
ದಾಸಿಯಾನೆರದು ಕಾಲಾಂತರದಲ್ಲಿ 
ವಾಸವಾದನು ಪಂಚಗಂಗೆಯ ತೀರದಿ 
ಲೇಶವಾದರು ಪುಣ್ಯಮಾಡದೆ ಬಲು ಮಹಾ 
ದೋಷಾಕಾರಿಯಾಗಿ ಇರುತಿರೆ ಕಾರ್ತಿಕಾ 
ಮಾಸ ಪ್ರಾಪುತವಾಗೆ ಪಂಚತ್ವಗೈಯ್ಯಲು 
ಆ ಸಮಯದಲ್ಲಿ ಯಮದೂತರು ಬಂದೂ 
ಘಾಶೆಮಾಡುತಿರೆ ಪಂಚಗಂಗೆಯಲೀ 
ವಾಸಾಮಾಡಿದ ಪುಣ್ಯಸುಪ್ರಭಾವದಿಂದಾ 
ಕೇಶವದೂತರು ಬಂದು ಕಟ್ಟಿದ ದುಷ್ಟಾ 
ಪಾಶವ ಬಿಡಿಸಿ ದುರಿತದೂರನ ಮಾಡಿ 
ಲೇಸು ಪಾಲಿಸಿದರು ಮುಕ್ತಿಪಥವ ತೋರಿ 
ದೇಶದೊಳಗೆ ಇದೆ ಏನೆಂಬೆನಾಶ್ಚರ್ಯ 
ಮೀಸಲಮನದಲ್ಲಿ ಈ ಗಂಗೆಯಲಿ ಬಂದು 
ಲೇಶ ಸಾಧನ ಮಾಡೆ ಆವಾವಾದೇಹಿಗೆ 
ನಾಶವಿಲ್ಲದಾ ಪುಣ್ಯಬಾಹುದು ತಡಿಯಾದೆ 
ಶ್ರೀಶಾ ಮೂರುತಿಪತಿ ವಿಜಯವಿಠಲ ಹೃ 
ದ್ದಾ ಸರೋವರದಲಿ ಕ್ರೀಡೆಯಾಡುವ ಬಂದು ॥೪॥

 ಆದಿತಾಳ 

ಆದಿಯುಗಾದಲ್ಲಿ ಧರ್ಮಾನದಿ ತ್ರೈತಾ 
ವೇದಶಿರನ ಮಗಳು ಧೌತಪಾಪರೆನ್ನಿ 
ಆ ದ್ವಾಪರದಲಿ ಬಿಂದು ಸರೋವರ 
ವಾದದ್ದು ಕಲಿಯುಗಕೆ ಪಂಚನದಿ ಎನಿಸುವುದು 
ಸಾಧುಜನಾ ಇನಿತು ತುತಿಸಿ ವಂದಿಸುವರು 
ಈ ಧರೆಯೊಳಗಿದೆ ವಾಸಕ್ಕೆ ಯೋಗ್ಯವೆನ್ನಿ 
ಮಾಧವನ್ನ ಸನ್ನಿಧಿ ಕಾಶಿಕ್ಷೇತ್ರದ ಮಧ್ಯಾ 
ಸಾಧನಾ ಮಾಳ್ಪದಕೆ ಇದೆ ಮಹಾಪುಣ್ಯಭೂಮಿ
ವೇದಗರ್ಭಾದಿಗಳು ಈ ಮಾಘದಲಿ ಬಂದು
ವೈದಿಕಮಾರ್ಗದಲ್ಲಿ ಸುಖಿಸುವರು ನಿತ್ಯಾ
ಪಾದಾರ್ಧಕಾಲಾ ಪಂಚಗಂಗೆ ಎಂದು ಸ್ಮರಿಸಿದರೆ
ಐದುವಾ ಸತ್ಕರ್ಮ ಭಯದೂರನಾಗುವ
ಆದಿಮೂರುತಿ ವಿಜಯವಿಠಲರೇಯಾ 
ಮೋದಮತಿಕೊಡುತಿಪ್ಪ ಇದನು ನೆನಿಸಿದವಗೆ ॥೫॥

 ಜತೆ 

ಪಂಚಗಂಗೆಯ ಯಾತ್ರೆಮಾಡಿ ಭಕುತಿಯಿಂದ 
ಪಂಚರೂಪಾತ್ಮಕಾ ವಿಜಯವಿಠಲ ಒಲಿವ  ॥೬॥
*********