Showing posts with label ಆರಮಗನೆಂದರಿಯೆವೆ ಇವ ನಮ್ಮ ಕೇರಿಯೊಳು purandara vittala. Show all posts
Showing posts with label ಆರಮಗನೆಂದರಿಯೆವೆ ಇವ ನಮ್ಮ ಕೇರಿಯೊಳು purandara vittala. Show all posts

Thursday, 12 August 2021

ಆರಮಗನೆಂದರಿಯೆವೆ ಇವ ನಮ್ಮ ಕೇರಿಯೊಳು purandara vittala

check similar by vadirajaru


( ರಾಗ ಭೈರವಿ. ಝಂಪೆ ತಾಳ) 


ಆರ ಮಗನೆಂದರಿಯೆವೆ ಇವ, ನಮ್ಮ ಕೇರಿಯೊಳು ಸುಳಿದು ಪೋದನಮ್ಮ ||ಪ|| 


ಪಾರಿಜಾತವ ತುರುಬಿದ, ಕಸ್ತೂರಿ ಗೀರು ಗಂಧವ ತಿದ್ದಿಹನಮ್ಮ ದೂರದಲಿ ನಿಂತುಕೊಂಡು, ಸೋಗೆಕಣ್ಣು ಓರೆನೋಟದಿ ನೋಡುವನಮ್ಮ || 

ಶಂಖ ಚಕ್ರವ ಪಿಡಿದಿಹ ತಾನು, ಬಲು ಬಿಂಕದಲಿ ಕೊಳಲೂದುವನಮ್ಮ ಶಂಕೆಯಿಲ್ಲದೆ ಬದಿಯಲಿ ಬಂದುನಿಂತು ಪೊಂಕದಲಿ ನಲಿದಾಡುವನಮ್ಮ ||

ನೀಲಮೇಘದ ಮೈಯವ, ತುಲಸೀವನ- ಮಾಲೆ ಕೊರಳಲಿ ಧರಿಸಿಹನಮ್ಮ ಬಾಲ ಪ್ರಾಯದ ಚೆನ್ನಿಗ, ಬಂದು ಎಮ್ಮ ಓಲೈಸಿ ಅಪ್ಪಿ ಪೋದನಮ್ಮ || 

ಸೀತೆಯನು ತರಲು ಪೋಗಿ, ಸಾಗರಕೆ ಸೇತುವೆಯ ಕಟ್ಟಿಸಿದನೇ ಅಮ್ಮ ದೈತ್ಯ ರಾವಣನ ಕೊಂದು, ಲಂಕೆಯನು ಇತ್ತನೆ ವಿಭೀಷಣನಿಗೆ ಅಮ್ಮ ||

 ಗೋಕುಲದೊಳಗೆ ಪುಟ್ಟಿ , ಕೃಷ್ಣ ತ ಗೋಪಿಗೆ ಶಿಶುವಾದನೇ ಅಮ್ಮ ಆಕಳ್ಹಿಂಡುಗಳ ಕಾಯ್ದು , ರಂಗ ತಾ ಏಕ ಮಧುರೆಗೆ ಪೋದನೇ ಅಮ್ಮ ||

 ಪೀತಾಂಬರನುಟ್ಟಿಹ, ಪೊಳೆವ ಕಟಿ- ಸೂತ್ರವನು ಧರಿಸಿದವನೆ ಅಮ್ಮ ಮಾತುಳನ ಕೊಂದು ಪಟ್ಟ- ಗಟ್ಟಿದನೆ ತಾತ ಉಗ್ರಸೇನಗೆ ಅಮ್ಮ || 

ಮುತ್ತಿನ ಮೂಗುತಿಟ್ಟು, ಉಡುಪಿಯಲಿ ನಿತ್ಯ ಪೂಜೆಯ ಕೊಂಬುವನಮ್ಮ ಸತ್ಯನೆಂದೆನಿಸಿಕೊಂಡು ಸುಳಿದನೆ ಕರ್ತು ಪುರಂದರವಿಠಲನಮ್ಮ ||

***

pallavi


Ara maganendariyave iva namma kEriyoLu suLidu pOdanamma


caraNam 1


pArijAtava tarubida kastUri gIru kandhava tiddiha namma

dUradali nindu koNDu sOge kaNNu Ore nODadi nODuvanamma


caraNam 2


shankha cakrava piDidiha tAnu balu binkadali koLalUduvanamma

shankeyillade padiyali bandu nindu pongadali nalidADuvanamma


caraNam 3


nIlamEghada maiyava tulasI vana mAle koraLali dharisihanamma

bAla prAyada cenniga bandu emma Olaisi appi pOdanamma


caraNam 4


sIteyanu taralu pOgi sAgarake sEtuveya kaTTisidane amma

daitya rAvaNana kondu lankeyanu ittane vibhISaNanige amma


caraNam 5


pItAmbaranuTTiha poLeva kaTi sUtravanu dharisidavane amma

mAtuLana kondu paTTa gaTTidane tAta ugrasEnage amma


caraNam 6


muttina mUgutiTTu uDupiyali nitya pUjeya kombuvanamma

satyanendenisi koNDu suLidane kartu purandara viTTalanamma

***


ರಾಗ ಭೈರವಿ. ಝಂಪೆ ತಾಳ)

ಆರ ಮಗನೆಂದರಿಯೆವೆ ಇವ, ನಮ್ಮ
ಕೇರಿಯೊಳು ಸುಳಿದು ಪೋದನಮ್ಮ ||ಪ||

ಪಾರಿಜಾತವ ತುರುಬಿದ, ಕಸ್ತೂರಿ
ಗೀರು ಗಂಧವ ತಿದ್ದಿಹನಮ್ಮ
ದೂರದಲಿ ನಿಂತುಕೊಂಡು, ಸೋಗೆಕಣ್ಣು
ಓರೆನೋಟದಿ ನೋಡುವನಮ್ಮ ||

ಶಂಖ ಚಕ್ರವ ಪಿಡಿದಿಹ ತಾನು, ಬಲು
ಬಿಂಕದಲಿ ಕೊಳಲೂದುವನಮ್ಮ
ಶಂಕೆಯಿಲ್ಲದೆ ಬದಿಯಲಿ ಬಂದುನಿಂತು
ಪೊಂಕದಲಿ ನಲಿದಾಡುವನಮ್ಮ ||

ನೀಲಮೇಘದ ಮೈಯವ, ತುಲಸೀವನ-
ಮಾಲೆ ಕೊರಳಲಿ ಧರಿಸಿಹನಮ್ಮ
ಬಾಲ ಪ್ರಾಯದ ಚೆನ್ನಿಗ, ಬಂದು ಎಮ್ಮ
ಓಲೈಸಿ ಅಪ್ಪಿ ಪೋದನಮ್ಮ ||

ಸೀತೆಯನು ತರಲು ಪೋಗಿ, ಸಾಗರಕೆ
ಸೇತುವೆಯ ಕಟ್ಟಿಸಿದನೇ ಅಮ್ಮ
ದೈತ್ಯ ರಾವಣನ ಕೊಂದು, ಲಂಕೆಯನು
ಇತ್ತನೆ ವಿಭೀಷಣನಿಗೆ ಅಮ್ಮ ||

ಗೋಕುಲದೊಳಗೆ ಪುಟ್ಟಿ , ಕೃಷ್ಣ ತ
ಗೋಪಿಗೆ ಶಿಶುವಾದನೇ ಅಮ್ಮ
ಆಕಳ್ಹಿಂಡುಗಳ ಕಾಯ್ದು , ರಂಗ ತಾ
ಏಕ ಮಧುರೆಗೆ ಪೋದನೇ ಅಮ್ಮ ||

ಪೀತಾಂಬರನುಟ್ಟಿಹ, ಪೊಳೆವ ಕಟಿ-
ಸೂತ್ರವನು ಧರಿಸಿದವನೆ ಅಮ್ಮ
ಮಾತುಳನ ಕೊಂದು ಪಟ್ಟ- ಗಟ್ಟಿದನೆ
ತಾತ ಉಗ್ರಸೇನಗೆ ಅಮ್ಮ ||

ಮುತ್ತಿನ ಮೂಗುತಿಟ್ಟು, ಉಡುಪಿಯಲಿ
ನಿತ್ಯ ಪೂಜೆಯ ಕೊಂಬುವನಮ್ಮ
ಸತ್ಯನೆಂದೆನಿಸಿಕೊಂಡು ಸುಳಿದನೆ
ಕರ್ತು ಪುರಂದರವಿಠಲನಮ್ಮ ||
********

  ..

ಆರ ಮಗನೆಂದರಿಯೆವೆ ಇವ ನಮ್ಮಕೇರಿಯೊಳು ಸುಳಿದು ಪೋದ ಪ.


ನೀಲವರ್ಣನ ಮೈಯ್ಯವ ತುಲಸಿ ವನ-ಮಾಲೆ ಕೊರಳೊಳು ಕೌಸ್ತುಭಬಾಲಪ್ರಾಯದ ಚೆನ್ನಿಗ ಬಂದು ಪೋ-[ಗ]ಲು ಸನ್ನೆಯ ಮಾಡಿದ1


ಚಿಕ್ಕಪ್ರಾಯದ ಚೆನ್ನಿಗ ಯೌವನದಲುಕ್ಕುವ ಕಡುಚೆಲುವನೆಚೊಕ್ಕಟಾದ ಚದುರನೊಬ್ಬ ಕುಚಕೆ ಕೈ-ಯಿಕ್ಕಿ ಕಸ್ತೂರಿ ಪೂಸಿದ 2


ಪೀತಾಂಬರನುಡಿಸಿದ ವಿನಯ ಸವಿ-ಮಾತುಮಾತಿಗೆ ನಗಿಸಿದಪ್ರೀತಿಯಿಂದಲಿ ತನ್ನ ಚೆಂದುಟಿಯ ಅಧರಾ-ಮೃತವನುಣಿಸಿದ3


ಪಾರಿಜಾತವ ಸೂಡಿದ ಕಸ್ತೂರಿಯಗೀರುನಾಮವ ತಿದ್ದಿದದೂರದಲಿ ನಿಂತು ಎನ್ನ ಸೋಗೆಗಣ್ಣಓರೆನೋಟದಿ ನೋಡಿದ4


ಆಗ ಮೊದಲಾಗಿ ತನುವಾ ಮದನಶರತಾಗಿ ಕಟ್ಟುಡುಗಿದಾವೆಬೇಗದಲಿ ಹಯವದನ ಬಂದೆನ್ನಮೋಹದಿಂದಲಿ ಕೂಡಿದ5

***