Showing posts with label ಉಪ್ಪವಡಿಸಯ್ಯ ಹರಿಯೇಏಳೈ purandara vittala. Show all posts
Showing posts with label ಉಪ್ಪವಡಿಸಯ್ಯ ಹರಿಯೇಏಳೈ purandara vittala. Show all posts

Wednesday 4 December 2019

ಉಪ್ಪವಡಿಸಯ್ಯ ಹರಿಯೇಏಳೈ purandara vittala

ಪುರಂದರದಾಸರು
ಉಪ್ಪವಡಿಸಯ್ಯ ಹರಿಯೇಏಳೈ ಹೃಷಿಕೇಶ ಏಳುರವಿ-ಶಶಿನಯನ ಪ.

ಏಳು ಪಶುಗಳ ಕಾಯ್ದು ಪಾಲಿಸಿದೆ ಗೋಕುಲವಏಳು ಸುರವಂದಿತನೆ ಏಳು ಭೂಸತಿರಮಣಉಪ್ಪವಡಿಸಯ್ಯ ಹರಿಯೇ ಅಪಪಚ್ಚೆ ಮುಡಿವಾಳಗಳು ಅಚ್ಚ ಸೇವಂತಿಗೆಯುಬಿಚ್ಚು ಮಲ್ಲಿಗೆ ಜಾಜಿ ಸಂಪಿಗೆಯುಪುನ್ನಾಗಅಚ್ಚರಿಯ ಬಕುಲ ಕೆಂಜಾಜಿ ಕೇತಕಿಕುಸುಮಗುಚ್ಛಗಳಅಚ್ಚ ಜಾಣೆಯರು ಶ್ರೀಗಂಧ ಕಸ್ತೂರಿ ಪುನುಗುಬಿಚ್ಚು ಬಿಳಿಯೆಲೆಯಡಿಕೆ ಪಿಡಿದು ನಿಂತಿಹರಯ್ಯಮುಚ್ಚುತಿವೆ ತಾರೆಗಳು ಹೆಚ್ಚುತಿವೆ ರವಿಕಿರಣ ಅಚ್ಯುತನೆಉಪ್ಪವಡಿಸೊ 1

ಚೆನ್ನೆಯರು ಚದುರೆಯರು ಸುಗುಣಸಂಪನ್ನೆಯರುಪನ್ನೀರು ತುಂಬಿರ್ದ ಪೊನ್ನ ತಂಬಿಗೆಗಳನುರನ್ನಗನ್ನಡಿಯನ್ನು ಪಿಡಿದು ನಿಂತಿರುವರೈ ಪನ್ನಂಗಶಯನ ಏಳೈ ||ಮನ್ನಣೆಯ ನಾರದರು ಮೊದಲಾದ ಮುನಿನಿಕರನಿನ್ನ ಮಹಿಮೆಗಳನ್ನು ಪಾಡಿ ನಲಿಯುವರಯ್ಯಇನ್ನು ಏಳೇಳು ಉದಯದ ಸಮಯ ಸಿರಿಯರಸಚೆನ್ನಿಗನೆ ಉಪ್ಪವಡಿಸೊ 2

ದೇವದುಂದುಭಿ ಮೊಳಗೆ ದೇವಕನ್ನೆಯರೆಲ್ಲದೇವಾಂಗ ವಸ್ತ್ರವನು ಪಿಡಿದು ನಿಂತಿಹರಯ್ಯದೇವ ದೇವೇಶ ನಿಮ್ಮೋಲಗದ ಸಂಭ್ರಮಕೆ ದೇವತೆಗಳೆಲ್ಲ ಕರೆದು ||ದೇವ ಪ್ರಹ್ಲಾದಬಲಿ ಮುಖ್ಯರನು ಕಾಯ್ದವನೆದೇವ ಬ್ರಹ್ಮನ ಪಡೆದ ದೇವಗಂಗೆಯ ಪಿತನೆದೇವ ದೇವೋತ್ತಮನೆ ದೇವಾಧಿದೇವ ಪುರಂದರವಿಠಲಉಪ್ಪವಡಿಸೊ 3
***

pallavi

uppevaDisayya hariye

anupallavi

Elai hrSIkEsha Elu ravi shashi nayana Elu pashugaLa kAidu pAliside gOkulava Elu sura vanditane Elu bhUsati ramaNa uppavaDisayya hariye

caraNam 1

pacce mADivALagaLu acca sEvantikeyu biccu mallige jAji sampigeyu punnAga
accariya bakula kejjAji kEtaki kusuma guccagaLa piDidu koNDu acca jANeyaru
shrIgandha kastUri punugu biccu piLiyeleyaDige piDidu nintiharayya
muccutive tAregaLu heccutive ravikiraNa acyutane uppavaDisO

caraNam 2

cenneyaru cadureyaru sugaNa sampanneyaru pannIru tumbirda ponna
tambigegaLanu rannagaNNadiyennu piDidu nintiruvarai pannaga shayana eLai
mannaNeya nAradaru modalAda muni nikara ninna mahimegaLannu pADi
naliyuvarayya innu hELu udayada samaya siriyarasa cennigane uppavaDisO

caraNam 3

dEva dundubhi moLage dEva kanneyarella dEvAnga vastravanu piDidu
nintiharayya dEva dEvEsha nimmOlagada sambhramake dEvategaLella neredu
dEva prahlADa bali mukhyaranu kAidavane dEva brahmana paDeda dEva gangeya
pitane dEva dEvOttamane dEvAdi dEva purandara viTTala uppavadisO
***