ರಾಗ ಧನಶ್ರೀ ಲಾವಣಿಧಾಟಿ
ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೋ
ಭ್ರಷ್ಟನ ಬಾಯೊಳಗೊಂದು ಕೆರ ||ಪ||
ನಿಷ್ಠೆಯೊಳ್ ಹರಿದಾಸರ ಸೇವಿಸದ ಕ-
ನಿಷ್ಠನ ಬಾಯೊಳಗೊಂದು ಕೆರ ||ಅ||
ನರಹರಿಮಹಿಮೆಯ ಸುಳ್ಳೆಂತೆಂಬುವ ನರನ ಬಾಯೊಳಗೊಂದು ಕೆರ
ಪರಿಪರಿಯಿಂದಲಿ ಕುಹಕವನಾಡುವ ದುರುಳನ ಬಾಯೊಳಗೊಂದು ಕೆರ
ಹರಿಸರ್ವೋತ್ತಮನೆಂದು ತಿಳಿಯದಹಂಕಾರಿಯ ಬಾಯೊಳಗೊಂದು ಕೆರ
ದುರುಳನಾಗಿ ಹರಿಶರಣರ ಸೇರದೆ ಮೆರೆವನ ಬಾಯೊಳಗೊಂದು ಕೆರ ||
ಶ್ರುತಿಶಾಸ್ತ್ರಗಳು ಸುಳ್ಳೆಂತೆಂಬುವ ಶುನಕನ ಬಾಯೊಳಗೊಂದು ಕೆರ
ಮತಿಯಿಲ್ಲದೆ ಮದನನಯ್ಯಗೆ ದ್ರೋಹವ ಮಾಳ್ಪನ ಬಾಯೊಳಗೊಂದು ಕೆರ
ಗತಿ ನೀನೆ ಹರಿಯೆಂತಿರುವರ ಕಂಡು ಕಾಡುವನ ಬಾಯೊಳಗೊಂದು ಕೆರ
ಅತಿಹರುಷದಿ ಹರಿಕಥೆ ಪೇಳ್ವಲ್ಲಿ ಅಡ್ಡಿಪೇಳ್ವನ ಬಾಯೊಳಗೊಂದು ಕೆರ ||
ನಾನೇ ದೇವರು ಎಂದು ಕುಣಿವ ಬಲುಹೀನನ ಬಾಯೊಳಗೊಂದು ಕೆರ
ಮಾನಿತರಾದರ ಹಿಂದು ಮುಂದಾಡುವ ಕೋಣನ ಬಾಯೊಳಗೊಂದು ಕೆರ
ನಾನಾ ಪರಿಯಲಿ ನಡತೆಹೀನನಾಗಿ ನಡೆವನ ಬಾಯೊಳಗೊಂದು ಕೆರ
ಗಾನಲೋಲ ನಮ್ಮ ಪುರಂದರವಿಠಲನ ನೆನೆಯದ (/ಕಾಣದನ ) ಬಾಯೊಳಗೊಂದು ಕೆರ ||
***

pallavi
krSNana bhajipage mukutillembO bhraSTana bAyoLagondu kera
anupallavi
niSTeyoL haridAsara sEvisada kaniSThana bAyoLgondu kera
caraNam 1
narahari mahimeya suLLendembuva narana bAyiyoLagondu kera
paripariyindali guhakavanADuva duruLana bAyoLagondu kera
hari sarvOttamanendu tiLiyadahankAriya bAyoLagondu kera
duruLanAgi hari sharaNava sErade merevana bAyoLgondu kera
caraNam 2
shruti shAstragaLu suLLendembuva shunakana bAyoLagondu kera
matiyillade madananayyage drOhava mALpana bAyoLagondu kera
gati nIne hiriyentiruvara kaNDu kADuvana bAyoLagondu kera
ati haruSadi harikathe pELvalli aDDi pELvana bAyoLagondu kera
caraNam 3
nAnE dEvaru endu kuNiva balu hInana bAyoLagondu kera
mAnitarAdara hindu mundADuva kONana bAyoLagondu kera
gAnalOla namma purandara viTTalana neneyada bAyoLagondu kera
***