Showing posts with label ತಿರುಪತಿ ವೆಂಕಟರಮಣ ನೀನು ಧರಣಿಯೊಳ್ಸರ್ವರಿಗಧಿಕ rajesha hayamukha. Show all posts
Showing posts with label ತಿರುಪತಿ ವೆಂಕಟರಮಣ ನೀನು ಧರಣಿಯೊಳ್ಸರ್ವರಿಗಧಿಕ rajesha hayamukha. Show all posts

Thursday 5 August 2021

ತಿರುಪತಿ ವೆಂಕಟರಮಣ ನೀನು ಧರಣಿಯೊಳ್ಸರ್ವರಿಗಧಿಕ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ತಿರುಪತಿ ವೆಂಕಟರಮಣ ನೀನು

ಧರಣಿಯೊಳ್ಸರ್ವರಿಗಧಿಕ

ತಿರುಪತಿ ವೇಂಕÀಟರಮಣ ಪ


ಸ್ವಾಮಿ ಪುಷ್ಕರಿಣಿಯ ತಟದಿ

ವಾಸ ಮಾಡಿಕೊಂಡಿರುವೆಯೊ ನೀನು |

ಭೂಮಿಯೊಳಗೆಲ್ಲ ಸಾಧು ಸಜ್ಜನರು

ನೇಮದಿಂದಲಿ ನಿನ್ನ ಸೇವಿಪರು 1


ಮಂಜುಗುಣಿಯ ಪುರದೊಳಗೆ ಬಂದು

ನಿಂದಿರುವಿ ವೆಂಕಟೇಶ

ಕಂಜಾಕ್ಷ ವರ ಚಕ್ರ ಶಂಖ ಮತ್ತೆ

ಶರಚಾಪಗಳನ್ನೆತ್ತಿ ಮೆರೆದೀ 2


ಜಗಕೆಲ್ಲ ಶೇಷಾದ್ರಿಯಂಥ

ಕ್ಷೇತ್ರವಿಲ್ಲೆಂದು ತೋರಿಸುತಿರುವಿ |

ಖಗವರನನ್ನೇರಿ ತಿರುಗಿ ಬಂದು

ತಿರುಪತಿ ಕ್ಷೇತ್ರದೊಳಿರುವಿ 3


ವಾದಿರಾಜರು ನಿನ್ನ ಬಳಿಗೆ

ಪಾದ ಮುಟ್ಟದೆ ಜಾನುಗಳಿಂದ |

ಬಂದು ಸಾಲಿಗ್ರಾಮದ ಮಾಲೆಯನ್ನು

ಪಾದಕರ್ಪಿಸಿ ಸ್ತುತಿಸಿದರು ನಿನ್ನ 4


ಆಕಾಶರಾಜನ ಮಗಳು

ಬಂದು ರಾಜೇಶ ಹಯಮುಖ ನಿನಗೆ |

ಮಾಲೆ ಹಾಕುತ ಮುಂದೆ ನಿಂದಳು

ಶಂಕೆಯಿಲ್ಲದೆ ನಮಿಸಿದಳು ಮುದದಿ 5

***