..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ತಿರುಪತಿ ವೆಂಕಟರಮಣ ನೀನು
ಧರಣಿಯೊಳ್ಸರ್ವರಿಗಧಿಕ
ತಿರುಪತಿ ವೇಂಕÀಟರಮಣ ಪ
ಸ್ವಾಮಿ ಪುಷ್ಕರಿಣಿಯ ತಟದಿ
ವಾಸ ಮಾಡಿಕೊಂಡಿರುವೆಯೊ ನೀನು |
ಭೂಮಿಯೊಳಗೆಲ್ಲ ಸಾಧು ಸಜ್ಜನರು
ನೇಮದಿಂದಲಿ ನಿನ್ನ ಸೇವಿಪರು 1
ಮಂಜುಗುಣಿಯ ಪುರದೊಳಗೆ ಬಂದು
ನಿಂದಿರುವಿ ವೆಂಕಟೇಶ
ಕಂಜಾಕ್ಷ ವರ ಚಕ್ರ ಶಂಖ ಮತ್ತೆ
ಶರಚಾಪಗಳನ್ನೆತ್ತಿ ಮೆರೆದೀ 2
ಜಗಕೆಲ್ಲ ಶೇಷಾದ್ರಿಯಂಥ
ಕ್ಷೇತ್ರವಿಲ್ಲೆಂದು ತೋರಿಸುತಿರುವಿ |
ಖಗವರನನ್ನೇರಿ ತಿರುಗಿ ಬಂದು
ತಿರುಪತಿ ಕ್ಷೇತ್ರದೊಳಿರುವಿ 3
ವಾದಿರಾಜರು ನಿನ್ನ ಬಳಿಗೆ
ಪಾದ ಮುಟ್ಟದೆ ಜಾನುಗಳಿಂದ |
ಬಂದು ಸಾಲಿಗ್ರಾಮದ ಮಾಲೆಯನ್ನು
ಪಾದಕರ್ಪಿಸಿ ಸ್ತುತಿಸಿದರು ನಿನ್ನ 4
ಆಕಾಶರಾಜನ ಮಗಳು
ಬಂದು ರಾಜೇಶ ಹಯಮುಖ ನಿನಗೆ |
ಮಾಲೆ ಹಾಕುತ ಮುಂದೆ ನಿಂದಳು
ಶಂಕೆಯಿಲ್ಲದೆ ನಮಿಸಿದಳು ಮುದದಿ 5
***
No comments:
Post a Comment