..
kruti by ವೀರನಾರಾಯಣ Veeranarayana
ಕೊಳಲನೂದೆಲೋ ಕೃಷ್ಣ ಕೊಳಲನೂದೆಲೊ ಪ
ಕೊಳಲನೂದು ಮನದ ದುಗುಡಕಳೆದು ಮತ್ತೆ ಮನಕೆ ಪ್ರಶಾಂತೆತಳೆಯುವಂತೆ ನಿತ್ಯಮಂ_ಜುಳ ಸ್ವರಗಳನ್ನು ತೆಗೆದು ಅ.ಪ.
ಧರಿಸಿ ಕೈಯಲೀ ಕೊಳಿವೆಯಿರಿಸಿ ಬಾಯಲಿಭರದಿ ಉಸುರ ತುಂಬಿ ನಳಿನಬೆರಳುಗಳು ತೂತು ಮುಚ್ಚಿತೆರೆದು ಸವಿಯ ನಾದದಲ್ಲಿ ನಿಸಾರ ನಿ ದ ಪ ಮ ಪ ನಿ ಎಂದು 1
ಇಲ್ಲಿ ಪೀಠದಿ ಎದ್ದು ನಿಲ್ಲು ಥಾ7ಟದಿಮಲ್ಲಿಗೆ ವನಮಾಲೆ ಕೊರಳೊಳಲ್ಲಾಡುತಿರಲು ರೂಪದಲ್ಲಿ ಮನವಿನೈಕ್ಯವಾಗಿತಲ್ಲೀನರಾಗುವಂತೆ ಕೃಷ್ಣಾ 2
ಎದ್ದುನಿಂತು ಮಾಟದಿ ನಿಂತು ಮುದ್ದು ನೋಟದಿಬಿದ್ದವರನು ನೋಡಿ ನಮಗೆಶುದ್ಧ ಬುದ್ಧಿ ಕೊಟ್ಟು ನಮ್ಮದುದ್ಧರಿಪುದು ಗದುಗಿನ ಪ್ರಸಿದ್ಧ ವೀರನಾರಾಯಣ 3
***