ಒಡವಿಗೆ ಉಡುಗೆಯ ಪಡುವಲ ಗಡಲದ ದಡದಲಿ ನೆಲೆಸಿರುವ ಚೆಲುವ
ಆಲವ ಭೋದಾ ಮುನಿಗಳ ಪ್ರೀತಿಲಿ ಬಲದಲಿ ನಿಲಿಸಿರುವ
ಹಲವು ಪೂಜೆಗಳ ಸಲಿಸುವ ಯತಿಗಳ ಒಳಗೆ ಹೊರಗೆ ಇರುವ ಚೆಲುವ
ನವ ನವ ಪೂಜೆಯ ವಿವಿಧಲಂಕಾರದಿ ತಾ ಮಾಡಿಸಿಕೊಳುವ
ಭುವನ ಮೋಹನ ನೋಡುವವರಿಗೆ ವಿವರದಿ ಕಾಣಿಸುವ ಚೆಲುವ
ಶ್ರೀ ಕಮಲೇಶ ವಿಠಲ ರಾಯನು ಬೇಕಾದಲ್ಲಿರುವ
ಈ ಕಲಿಯುಗದೊಳಿರೆ ಕೈವಲ್ಯವ ತಾ ಕಾಮಿತ ಕೊಡುವ
*********