Showing posts with label ಇವನ ಕಂಡಿರ್ಯಾ ಕಾವಕರುಣನ ಭಾವ ಭಾವಿಸುವ mahipati. Show all posts
Showing posts with label ಇವನ ಕಂಡಿರ್ಯಾ ಕಾವಕರುಣನ ಭಾವ ಭಾವಿಸುವ mahipati. Show all posts

Wednesday, 1 September 2021

ಇವನ ಕಂಡಿರ್ಯಾ ಕಾವಕರುಣನ ಭಾವ ಭಾವಿಸುವ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು


ಇವನ ಕಂಡಿರ್ಯಾ ಕಾವಕರುಣನ ಭಾವ ಭಾವಿಸುವ ಪರಿಯಾಗುವ ದೇವನ P

ಸಗುಣಲೀಹ್ಯನಾ ಭಕುತಿಗೊಲಿವನಾ ಸುಗಮದಿಂದ ನಿಗಮನುಳುಹಿ ನಗವ ನೆಗೆದನಾ 1 
ಸಿರಿಯ ಲೋಲನಾ ವರಕೃಪಾಲನಾ ಧರಿಯನುಳುಹಿ ತರಳಗೊಲಿದು ಪ್ರಿಯವಾದನಾ2 
ವರವ ಬಲಿಗೆ ಇತ್ತು ದೋರಿದ ಭಾರ್ಗವರೂಪನಾ 3 
ಪರಮ ಆತ್ಮನಾ ಹರಿಸರ್ವೋತ್ತಮನಾ ಸುರರ ನೆರೆಯ ಬಿಡಿಸಿ ಹೊರಟ ಪಾಂಡವಪ್ರಿಯನಾ 4 
ಹೊಳೆವ ತೇಜನಾ ಮೂಲೋಕ ಪಾವನಾ ಹಳಿದು ವ್ರತವ ನೋಡಿ ಹಯವನೇರಿ ಸುಳಿದನಾ 5 
ಘನ ಮಹಿಮನಾ ದಯಾ ನಿಸ್ಸೀಮನಾ ದೀನ ಮಹಿಪತಿಸ್ವಾಮಿ ಭಾನುಕೋಟೆ ದೀಪ್ತನಾ 6
***