ankita ಶ್ರೀಶಕೇಶವ
ರಾಗ: ನೀಲಾಂಬರಿ ತಾಳ: ಆದಿ
ಧನ್ಯನಾದೆ ನಾ ಗುರುರಾಜರ ನೋಡಿ ಪ
ಸನ್ನುತಾಂಗ ಗುರುರಾಜರ ನೋಡಿ ಅ.ಪ
ಘನ್ನಮಹಿಮರಿವರು ವರಪಾವನ್ನಚರಿತರಿವರು
ಮುನ್ನ ಮಾಡಿದಪರಾಧಗಳೆಣಿಸದೆ ಉನ್ನತ ಸುಖಗಳನೀವರ ನೋಡಿ 1
ಬುಧರ ಮಹಾತ್ಪ್ರಭುವೋ ಭಜಿಪರ ಮಧುರ ಸುರದ್ರುಮವೋ
ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು
ಅಧಮರ ಮುರಿದಿಹ ಧೀರರ ನೋಡಿ 2
ಶ್ರೀಶಕೇಶವನ್ನ ಮನದೊಳುಪಾಸನೆಗೈವರನು
ಭಾಸುರಾಂಗಯತಿ ರಾಘವೇಂದ್ರರನು
ಈ ಸಮಯದಿ ಕೊಂಡಾಡುತ ನೋಡಿ 3
***