RSS song .
ಕಿವಿಮಾತು ನುಡಿಯುತ್ತೇನೆ ಕೊಂಚ ಲಾಲಿಸೋ ತಮ್ಮಾ
ಸಂಘಟನೆ ಗುಟ್ಟಿದು ತಿಳಿಯಬಾರೋ ||ಪ||
ಗುಂಡಿಗೆ ಆರದ ಬೆಂಕಿಯಿರಲಿ
ಭುಗಿಲೆದ್ದು ಉರಿಯುವ ನಿತ್ಯಜ್ವಾಲೆ
ನಂದದ ಧ್ಯೇಯದ ಅಗ್ನಿಯುಜ್ವಲ
ಕಾರ್ಯಕ್ಕೆ ಮಾಡುವ ಇಂಧನವು ||೧||
ಮನವೆಂದು ತಣಿಸುವ ತಂಪಿರಲಿ
ಶೀತಲದಿರುಳಿನ ಬೆಳದಿಂಗಳು
ಸಾಂತ್ವನ ಸ್ನೇಹದ ನುಡಿ ಇಂಪು
ಬೆಸುಗೆಯ ತೋಪಿನಲಿ ಪೆಂಪು ಪೆಂಪು ||೨||
ಪಾದದಿ ಉರುಳಲಿ ತಿರುಗು ಚಕ್ರ
ಸಂಪರ್ಕ ದೊರೆಯಲಿ ದೆಸೆ ಶುಕ್ರ
ಹೂವಿನ ಪರಿಮಳ ಹರಡುವಂತೆ
ನಡೆವ ಹಾದಿಯೆಲ್ಲಾ ಘಮ ಘಮ ||೩||
ಮುಖದಲ್ಲಿ ಮಿನುಗಲಿ ಕಲ್ಲು ಸಕ್ಕರೆ
ಮುಗುಳ್ನಗೆ ಸೂಸಲಿ ಸಿಹಿ ಅಕ್ಕರೆ
ಸಹವಾಸದಲ್ಲಿ ವ್ಯಕ್ತಿ ನಕ್ಕರೆ
ಸಮಾಜ ಬಾನಲ್ಲಿ ತಾರೆ ತಾರೆ ||೪||
***
kivimaatu nuDiyuttEne koMca lAlisO tammA
saMGaTane guTTidu tiLiyabArO ||pa||
guMDige Arada beMkiyirali
Bugileddu uriyuva nityajvAle
naMdada dhyEyada agniyujvala
kAryakke mADuva iMdhanavu ||1||
manaveMdu taNisuva taMpirali
SItaladiruLina beLadiMgaLu
sAMtvana snEhada nuDi iMpu
besugeya tOpinali peMpu peMpu ||2||
pAdadi uruLali tirugu cakra
saMparka doreyali dese Sukra
hUvina parimaLa haraDuvaMte
naDeva hAdiyellA Gama Gama ||3||
muKadalli minugali kallu sakkare
muguLnage sUsali sihi akkare
sahavaasadalli vyakti nakkare
samAja bAnalli tAre tAre ||4||
***