Showing posts with label ಎಳೆಯನೆನ್ನದಿರಮ್ಮ ಎಲೆಗೋಪಿಕೃಷ್ಣಗೆ prasannavenkata. Show all posts
Showing posts with label ಎಳೆಯನೆನ್ನದಿರಮ್ಮ ಎಲೆಗೋಪಿಕೃಷ್ಣಗೆ prasannavenkata. Show all posts

Sunday, 10 November 2019

ಎಳೆಯನೆನ್ನದಿರಮ್ಮ ಎಲೆಗೋಪಿಕೃಷ್ಣಗೆ ankita prasannavenkata

by ಪ್ರಸನ್ನವೆಂಕಟದಾಸರು
ಎಳೆಯನೆನ್ನದಿರಮ್ಮ ಎಲೆಗೋಪಿಕೃಷ್ಣಗೆಕೆಳದೇರುಟ್ಟಿಹವಸನಕಳೆವ ಜಾರಮಣಿಗೆಪ.

ನಡುವಿರುಳೆ ಬಂದೆಮ್ಮ ನಲ್ಲರಂತೆ ಮಾತನಾಡಿಪಿಡಿದು ಚುಂಬಿಸಿ ಪರಿಯಂಕದಲ್ಲಿ ಕೂಡಿಮಡದಿಯರಂತ ನಾವು ಮಾಯ ಮೋಸದಿ ಗೆಲ್ಲುವಒಡನೆ ಗೋವಳನಂತೆ ಒಪ್ಪುವ ಗಾಡಿಕಾರಗೆ 1

ಬಾಲಕನಂತೆ ಕಂಗೊಳಿಸಿ ಬೀದಿಯೊಳು ಸುಳಿಯಲುನಲವಿಂದೆತ್ತಿಕೊಂಡು ನೇಹ ತೊಡರಿ ಅಪ್ಪಿಕೊಂಡುನೀಲದ ಹಣ್ಣ ನೀಡೆ ತಾನಾಲದ ಹಣ್ಣು ಬೇಡುವಮೇಲಣ ಮಾತೇನೆ ಬೇಗ ಮೊಳೆಮೊಲೆಗ್ಹೆಣಗುವಗೆ 2

ರನ್ನದುಂಗುರ ಬೆರಳ ರತಿಗೆ ಮಾರನ ಸರಳಕನ್ನೆಯರನೆಲ್ಲ ಚೆಲ್ವ ಕಣ್ಣ ಸನ್ನೆಲೆ ಮೋಹಿಸುವಚಿನ್ನನೆನ್ನಬಹುದೆ ಇವಗೆಚಟುಲಪ್ರಾಯದವಗೆ ಪ್ರಸನ್ನ ವೆಂಕಟೇಶ ನಮ್ಮ ಸೇರಿ ಬೆನ್ನಬಿಡನಮ್ಮ 3
*******