controversial devaranama songs - must have been written due to fear and pressure of muslim rulers. So Don't popularise or share
ankita mohana vittala dasaru AND kanakadasaru
CONTROVERSIES
ಹೊಲೆಯರಿಲ್ಲದ ಊರೊಳು ಇರಬಾರದು ಪ
ಹೊಲೆಯರು ಬೆಳೆದರೆ ಉಣಲುಂಟು ಉಡಲುಂಟು ಅ.ಪ.
ಹೊಲೆಯರ ಸೇವಿಸಲು ಶುಭ ಶೋಭನ ಉಂಟುಹೊಲೆಯರ ನಿಂದಕನು ನಿರ್ಭಾಗ್ಯನುಹೊಲೆಯರಿಗೆ ಉಣಲಿಕ್ಕಿದವನ ಫಲಕ್ಕೆನೆಲೆಗಾಣೆ ನೆಲೆಗಾಣೆ ಧರೆಯೊಳಗೆ ನಾನು 1
ಹೊಲೆಯರು ಮುನಿದರೆ ನೆಲೆಯಿಲ್ಲ ನಿಭ ಇಲ್ಲಹೊಲೆಯರು ಒಲಿದರೆ ಕಷ್ಟವಿಲ್ಲಹೊಲೆಯರೇ ನಮ್ಮ ಸಲಹಲಿ ಸಾಕಲಿ ಎಂದುಫಲ್ಗುಣನ ಸಾರಥಿಯ ಪ್ರಾರ್ಥಿಸಿಕೊಳ್ವರು 2
ಹೊಲೆಯರಿಂದಲಿ ಸಕಲ ದೇವತೆಗಳ ಪೂಜೆಹೊಲೆಯರಿಂದಲಿ ಸಕಲ ಬಂಧು ಬಳಗಹೊಲೆಯರಿಗೆ ಸ್ವಾಮಿ ಮೋಹನ್ನ ವಿಠ್ಠಲಧೊರಿಯೆ ಪಾಂಡವರ ಪ್ರಿಯನೆಂದೆನ್ನು 3
***
ತುರುಕರಿಲ್ಲದ ಊರೊಳು ಇರಬಾರದು ಪ
ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ ಅ.ಪ.
ತುರುಕರು ಕರೆದರೆ ಉಣಬಹುದು ಉಡಬಹುದುತುರುಕರಿಂದಲಿ ಜಗಕೆ ಪರಮ ಸೌಖ್ಯಾ ||ತುರುಕರ ಸೇವೆ ಮಾಡಿದ ಮಾನವೋತ್ತಮನುಎರಡೊಂದು ಋಣದಿಂದ ಮುಕ್ತನಾಹಾ 1
ತುರುಕರಾ ನಿಂದಕನು ಪರಮ ದುಃಖಿಯು ಸಿದ್ಧತುರುಕರ ಅರ್ಚಿಸಿದವಗೆ ಪರಮ ಪದವೀ ||ತುರುಕರಿಗೆ ಗ್ರಾಸವಿತ್ತವನ ಫಲಕೆಲ್ಲು ಸರಿಗಾಣೆಸರಿಗಾಣೆ ಧರೆಯೋಳು ಅವನೆ ಧನ್ಯಾ 2
ತುರುಕರಾ ಪತಿ ಹರನು ತುರುಕರಿಂದಲಿ ಸಿರಿಯುತುರುಕರಿಂದಲಿ ಜಗಕೆ ಬೈಗು ಬೆಳಗೂ ||ತುರುಕರಾ ಪಾಲ ಶ್ರೀ ಗೋಪಾಲಕೃಷ್ಣನ್ನಸ್ಮರಣೆ ಮಾಡುತಲಿರೆ ಮೋಹನ್ನ ವಿಠಲ ಒಲಿವಾ 3
***
ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಪ
ಅಷ್ಟಮದ ಮತ್ಸರಗಳೆಂತೆಂಬ ಟಗರುಗಳುದೃಷ್ಟಿ ಜೀವಾತ್ಮನೆಂತೆಂಬ ಆಡುಸೃಷ್ಟಿ ಸಿದ್ಧ ಪ್ರಸಿದ್ಧವೆಂತೆಂಬ ಹೋತಗಳುಕಟ್ಟಿ ಕೋಲಿನಲಿ ಇರಿಯುತಿಹ ನಮ್ಮಜ್ಜ 1
ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳುಕಾದಿದ್ದು ನಮ್ಮಜ್ಜನ ಹಿಂಡೊಳಗೆಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆಡಲುಆದರಿಸಿ ಅಂಬಲಿಯನೆರೆವ ನಮ್ಮಜ್ಜ 2
ಅರಿವೆಂಬ ಮರಿಗಳು ಹಿಂಡಿನೊಳಗಡೆ ಬರಲುಮರೆವೆಂಬ ವ್ಯಾಘ್ರ ಕಿರುಬ ತೋಳಗಳು ಹೊಕ್ಕುತರುಬಿ ಹಿಂಜಾವದಲಿ ಕುರಿಯ ಮುರಿವುದ ಕಂಡು ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ 3
ಹುಟ್ಟುದಕೆ ಮೊದಲಿಲ್ಲ ಸಾವುದಕೆ ಕೊನೆಯಿಲ್ಲಹುಟ್ಟು ಸಾವಿನ ಹೊಲಬ ಬಲ್ಲ ನಮ್ಮಜ್ಜಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿಹೊಟ್ಟೆ ತುಂಬುವ ಹಾಗೆ ಎರೆವ ನಮ್ಮಜ್ಜ 4
ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತಕಲಿಯುಗಂಗಳನೆಲ್ಲ ಪೊರೆವಾತನೀತಜಲಜಾಕ್ಷ ಕಾಗಿನೆಲೆಯಾದಿಕೇಶವನ ಮನವೊಲಿಸಿ ಭಜಿಸದ ಮನುಜ ಹುಚ್ಚು ಕುರುಬ 5
***