..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಹರಿ ಬಂದ ನರಹರಿ ಬಂದ
ಕರಿಯ ಮೋಚಿಸಿದ ಸಿರಿವರ ಬಂದ ಪ
ದೇವ ಬಂದ ಪಾಂಡವರ ಭಾವ ಬಂದ
ಗೋವುಗಳ ಕಾವ ಕೃಪಾಸಿಂಧು ಬಂದ 1
ಖ್ಯಾತ ಬಂದ ಪಾರ್ಥಸೂತ ಬಂದ
ವಾತಸುತ ಭೀಮಸೇನಪ್ರಿಯ ಬಂದ 2
ಮುನಿ ಬಂದ ಜಾಮದಗ್ನ್ಯ ಬಂದ
ಭಾನುಕೋಟಿಸುಪ್ರಕಾಶ ವ್ಯಾಸ ಬಂದ 3
ರಾಜ ಬಂದ ದಶರಥಸುತ ಬಂದ |
ತೇಜಿಯೇರಿ ಮೆರೆದ ಕಲ್ಕಿದೇವ ಬಂದ 4
ಶ್ರೀಶ ಬಂದ ಮಹಿದಾಸ ಬಂದ
ಭಾಸುರಾಂಗ ದೇವ ಶ್ರೀನಿವಾಸ ಬಂದ 5
ನೀಲ ಬಂದ ಬಾಲಕೃಷ್ಣ ಬಂದ
ಬಾಲಧ್ರುವರಾಯಗೊಲಿದ ರಂಗ ಬಂದ 6
ಕೋಲ ಬಂದ ಬಲಭದ್ರನ ತಮ್ಮ ಬಂದ
ರಾಜೇಶ ಶ್ರೀಹಯಮುಖ ದೇವ ಬಂದ 7
***