Showing posts with label ಬಾರಯ್ಯ ಎನ್ನ ಮನ ಮಂದಿರಕೆ ಬೇರೊಂದು ಯೋಚನೆ shree krishna BAARAYYA ENNA MANA MANDIRAKE BERONDU YOCHANE. Show all posts
Showing posts with label ಬಾರಯ್ಯ ಎನ್ನ ಮನ ಮಂದಿರಕೆ ಬೇರೊಂದು ಯೋಚನೆ shree krishna BAARAYYA ENNA MANA MANDIRAKE BERONDU YOCHANE. Show all posts

Wednesday, 1 December 2021

ಬಾರಯ್ಯ ಎನ್ನ ಮನ ಮಂದಿರಕೆ ಬೇರೊಂದು ಯೋಚನೆ ankita shree krishna BAARAYYA ENNA MANA MANDIRAKE BERONDU YOCHANE

ಬಾರಯ್ಯ ಎನ್ನ ಮನ ಮಂದಿರಕೆ ಪ

ಬೇರೊಂದು ಯೋಚನೆ ಮಾಡದೆ ಸಿರಿಪತಿ ಅ.ಪ

ನಾ ರಾಜಸ ಬುದ್ಧಿಯೆಂಬಿಯ ನಿನ್ನಕಾರುಣ್ಯದ ಸೋನೆ ಸೊರಗುವುದೆವಾರ ವಾರಕೆ ಮೇಘವಾರಿಯ ಕರೆದರೆಧಾರುಣಿಗೆ ಕ್ಷಾಮ ಬರುವುದೆ ಕೃಷ್ಣ1

ತಾಮಸ ಬುದ್ಧಿಯೆಂಬಿಯ ನಿನ್ನಶ್ರೀಮೂರ್ತಿ ಹೊಳೆದರೆ ತಮವಡಗದೆಶ್ರೀ ಮನೋಹರನೆ ಭಾನು ಉದಿಸಿದರೆತಾಮಸವಡಗದೆ ಜಗದೊಳು ಕೃಷ್ಣ 2

ನಾ ದೋಷಿ ಕಠಿಣನೆಂತೆಂಬೆಯ ನಿನ್ನಪಾದಪದುಮ ಪಾಪಹರವಲ್ಲವೆಆ ದುಷ್ಟ ಶಿಲೆ ಸೋಕೆ ಋಷಿಪತ್ನಿಯಾದಳುನೀ ದಯಮಾಡೆ ನಾ ನೀಚನೆ ಸಿರಿಕೃಷ್ಣ 3

***