ವಿಜಯದಾಸ
ರಾಜವದನೆ ನೀ ಗುರು-
ರಾಜರಿರುವ ಸಂಭ್ರಮ ನೋಡೆ ಪ
ರಾಜಿಸುವ ಮುಖನ
ಪೂಜಿಸುವ ಯತಿವರನೆ ಅ.ಪ
ದೂಷಿತ ದುರ್ಜನರ
ತಾಸು ಬಾಳದಂತೆ ವಿ-
ಶೇಷದಿಂದ ಭಜಿಸುವರ
ಪೋಷಿಸುವ ಯತಿವರನೆ 1
ಪಾದ ನಂಬಿದವರಿಗೆ
ಮೋದವೀವ ದೇವನೆ
ಬೀದಿಬಿಡುವ ನಂಬಿದವರ
ವಾದಿರಾಜ ದೊರೆವರನೆ 2
ಅಜಪದಕೆ ಅರ್ಹನೆಂದು
ಗಜವರದನ ದಾಸನೆಂದು
ಭಜನೆ ಮಾಡುವ ನಿಜವ ಪೇಳುವ
ವಿಜಯವಿಠಲನ ಸೇವಕರಿವರೇ 3
*******
ರಾಜವದನೆ ನೀ ಗುರು-
ರಾಜರಿರುವ ಸಂಭ್ರಮ ನೋಡೆ ಪ
ರಾಜಿಸುವ ಮುಖನ
ಪೂಜಿಸುವ ಯತಿವರನೆ ಅ.ಪ
ದೂಷಿತ ದುರ್ಜನರ
ತಾಸು ಬಾಳದಂತೆ ವಿ-
ಶೇಷದಿಂದ ಭಜಿಸುವರ
ಪೋಷಿಸುವ ಯತಿವರನೆ 1
ಪಾದ ನಂಬಿದವರಿಗೆ
ಮೋದವೀವ ದೇವನೆ
ಬೀದಿಬಿಡುವ ನಂಬಿದವರ
ವಾದಿರಾಜ ದೊರೆವರನೆ 2
ಅಜಪದಕೆ ಅರ್ಹನೆಂದು
ಗಜವರದನ ದಾಸನೆಂದು
ಭಜನೆ ಮಾಡುವ ನಿಜವ ಪೇಳುವ
ವಿಜಯವಿಠಲನ ಸೇವಕರಿವರೇ 3
*******