ಶ್ರೀ ಗುರುವರ್ಯರಿಗೆ ಜಯಮಂಗಳ ನಿತ್ಯ
ಭೋಗಿಶಯನಪ್ರಿಯಗೆ ಶುಭಮಂಗಳ ಪ.
ಆನಂದರತ್ನರು e್ಞÁನಪ್ರಕಾಶ ಎಂದು
ನಾನಾ ವಿಧದಿ ಬಿರುದು ಪೊತ್ತವಗೆ
ಶ್ರೀನಿವಾಸನನು ಧ್ಯಾನವ ಮಾಳ್ಪಂಥ
e್ಞÁನಪೂರ್ಣರಾದ ಗುರುಗಳಿಗೆ 1
ಪರಮಪ್ರಿಯರು ಪರಿಮಳರೆಂದೆನಿಸುತ
ಪರಿ ಪರಿ ನಾಮವ ಧರಿಸಿಹಗೆ
ನರಸಿಂಹನನು ಹೃತ್ಸರಸಿಜದಲಿ ಕಂಡು
ಹರುಷವ ಪಡುವಂಥ ಗುರುಗಳಿಗೆ 2
ತಂದೆ ಮುದ್ದುಮೋಹನವಿಠ್ಠಲನೆಂಬಂಕಿತ
ಚಂದದಿಂದ ಗುರುಗಳಿಂ ಪಡೆದವಗೆ
ಬಂದ ಭಕ್ತರಿಗೆಲ್ಲ ಅಂಕಿತಕೊಟ್ಟು ಭವ
ಬಂಧನವ ಬಿಡಿಸುವ ಗುರುಗಳಿಗೆ 3
ಚಂದ್ರನ ತೆರದಿ ಪರಮಾರ್ಥ
ಚಂದ್ರೋದಯವ ನಿರ್ಮಿಸುವರಿಗೆ
ಚಂದದಿಂದ ಪರತತ್ವ ಪೇಳುವ
ಸುಂದರ ಮೂರುತಿ ಗುರುಗಳಿಗೆ 4
ಅಪಾರ ಕರುಣಾಜಲಧಿ ಎಂದೆನಿಪರಿಗೆ
ಶ್ರೀಪತಿ ಪಾದವ ತೋರ್ವಂಗೆ
ಗೋಪಾಲಕೃಷ್ಣವಿಠ್ಠಲನ ಧ್ಯಾನವನಿತ್ತು
ಕಾಪಾಡುವಂಥ ಶ್ರೀ ಗುರುಗಳಿಗೆ 5
*****